Thursday, March 22, 2018

ಸೂಳೆಕೆರೆ (ಶಾಂತಿ ಸಾಗರ ಹೂಳು ತೆಗೆಸುವುದು) - ಈ ವಿಧಾನವನ್ನು ಕರ್ನಾಟಕದ ಯಾವುದೇ ಕೆರೆ ಅಥವಾ ನದಿಗೆ ಅಳವಡಿಸಿಕೊಳ್ಳ ಬಹುದು

ಸ್ನೇಹಿತರೇ,
ನಮ್ಮ ಉದ್ದೇಶ - ಸೂಳೆಕೆರೆ ಉಳಿಸಿ ಮತ್ತು ಬೆಳೆಸಿ ಅಭಿಯಾನದಲ್ಲಿ ಎಲ್ಲರೂ ನಿಸ್ವಾರ್ಥದಿಂದ ಭಾಗವಯಿಸಿ.

ಸೂಳೆಕೆರೆ (ಶಾಂತಿ ಸಾಗರ ಹೂಳು ತೆಗೆಸುವುದು) - ಈ ವಿಧಾನವನ್ನು ಕರ್ನಾಟಕದ ಯಾವುದೇ ಕೆರೆ ಅಥವಾ ನದಿಗೆ ಅಳವಡಿಸಿಕೊಳ್ಳ ಬಹುದು

ಶಾಂತಿಸಾಗರದ ಹೂಳನ್ನು ತೆಗೆಸಬೇಕು ಎಲ್ಲರು ಸಹಕರಿಸಿ ಎಂದಾಗ, ಎಲ್ಲರೂ ಕೇಳಿದ ಪ್ರಶ್ನೆ ಒಂದೇ ಅಷ್ಟು ದೊಡ್ಡ ಕೆರೆಯ ಹೂಳು ತೆಗೆಸಲು ಕೋಟ್ಯಂತರ ರೂಪಾಯಿಗಳು ಬೇಕಾಗುತ್ತದೆ ಅದನ್ನು ಕೊಡುವವರು ಯಾರು ? ಹಣ ಎಲ್ಲಿಂದ ಬರುತ್ತದೆ ಎಂದು.

ಉತ್ತರ ತುಂಬಾ ಸರಳ ಸ್ನೇಹಿತರೇ,

ಚನ್ನಗಿರಿಯ ಗರಿಷ್ಟ ರೇಡಿಯಸ್ 20 ಕಿಲೋ ಮೀಟರ್ ಗಳು ಎಂದುಕೊಂಡರು.
ಇಂದಿನ ಟ್ರ್ಯಾಕ್ಟರ್ ಗುತ್ತಿಗೆಯ ಬಾಡಿಗೆ ಒಂದು ದಿನಕ್ಕೆ 3000 ರುಗಳು ಹಾಗಿರುತ್ತದೆ.
ಹಾಗೆಯೇ ಲಾರಿಯ ಒಂದು ದಿನದ ಗುತ್ತಿಗೆಯ ಬಾಡಿಗೆ 8 ರಿಂದ 10 ಸಾವಿರ ರೂಗಳು ಹಾಗಿರುತ್ತದೆ.

ಒಂದು ದಿನಕ್ಕೆ ಒಂದು ಲಾರಿ ಅಥವಾ ಟ್ರ್ಯಾಕ್ಟರ್ ನಿಂದ ಸರಾಸರಿ 8 ಲೋಡ್ ಮಣ್ಣನ್ನು ಹೊತ್ತು ರೈತರ ಭೂಮಿಗೆ ತಲುಪಿಸಬಹುದು ( ಇದು ಸರಾಸರಿ ಲೆಕ್ಕವಾಗಿರುತ್ತದೆ - ಏಕೆಂದರೆ ಕೆಲವು ಜಮೀನುಗಳು ಶಾಂತಿ ಸಾಗರ ಕೆರೆಗೆ ಸಮೀಪ ಇರಬಹುದು ಮತ್ತೆ ಕೆಲವು ಶಾಂತಿ ಸಾಗರದಿಂದ ದೂರ ಇರಬಹುದು)

ಒಂದು ಟ್ರಾಕರ್ ನಿಂದ ಒಂದು ದಿನಕ್ಕೆ 8 ಲೋಡ್ ಮಣ್ಣು ತೆಗೆದರೆ ರೈತರು ಒಂದು ಲೋಡ್ ಮಣ್ಣಿಗೆ ಕೊಡಬೇಕಾಗಿರುವ ಬೆಲೆ 3000 /8 = ಕೇವಲ 375 ರೂಪಾಯಿಗಳು ಅಂದರೆ ಹೀಗ ರೈತರು ಕೊಡುವ (700 - 800 ) ಹಣಕ್ಕಿಂತ 300 ರೂಪಾಯಿಗಳು ಕಡಿಮೆಯಾಗಿರುತ್ತದೆ.

ಹಾಗೆಯೇ ಒಂದು ಲಾರಿಯಿಂದ ಒಂದು ದಿನಕ್ಕೆ 8 ಲೋಡ್ ಮಣ್ಣನ್ನು ತೆಗೆದರೆ ಒಂದು ಲೋಡ್ ಮಣ್ಣಿಗೆ ರೈತರು ಕೊಡಬೇಕಾಗಿರುವ ಬೆಲೆ 10000 /8 = ಕೇವಲ 1250 ಅಂದರೆ ಹೀಗ ರೈತರು ಕೊಡುವ (3000 ) ಹಣಕ್ಕಿಂತ 1750 ರೂಪಾಯಿಗಳು ಕಡಿಮೆಯಾಗಿರುತ್ತದೆ.

ಅಂದರೆ ರೈತರು ಕೇವಲ ಲಾರಿ/ಟ್ರ್ಯಾಕ್ಟರ್ ಡೀಸೆಲ್ಗೆ ಮಾತ್ರ ಹಣವನ್ನು ನೀಡಿದಂತೆ ಹಾಗುತ್ತದೆ.

ಹಾಗಾಗಿ, ರೈತರು ಕಣ್ಣು ಮುಚ್ಚಿಕೊಂಡು ಕಡಿಮೆ ಬೆಲೆಯಲ್ಲಿ ನೂರಾರು ವರ್ಷಗಳು ನೀರಿನಲ್ಲಿ ಕೊಳೆತು ಫಲವತ್ತಾದ ಉತ್ಕೃಷ್ಟ ಮಣ್ಣನ್ನು ತಮ್ಮ ತೋಟಗಳಿಗೆ ಮತ್ತು ಜಮೀನುಗಳಿಗೆ ಹಾಕಿಸಿಕೊಳ್ಳುತ್ತಾರೆ ಮತ್ತು ಸ್ಟಾಕ್ ಕೂಡ ಮಾಡಿಕೊಳ್ಳುತ್ತಾರೆ.

ನಾವಿಲ್ಲಿ ಯಾರು ಒಂದು ರೂಪಾಯಿಗಳನ್ನು ನಮ್ಮ ಜೇಬಿನಿಂದ ಕೊಡುತ್ತಿಲ್ಲ ಮತ್ತು ಕೇಳುತ್ತಿಲ್ಲ ಸ್ನೇಹಿತರೇ, ನಾವು ನಮ್ಮ ಕೆರೆಯನ್ನು ಉಳಿಸಲು ಜವಾಬ್ದಾರಿಯನ್ನು ತೆಗೆದುಕೊಂಡು ಮುಂದೆ ಬರಬೇಕು ಅಷ್ಟೇ.

ಈಗಿನ ತಂತ್ರಜ್ಞಾನದ ಮೂಲಕ ಕೆರೆಯ ನೀರು ಖಾಲಿಮಾಡಿಸದೇ ಹೂಳನ್ನು ತೆಗೆಸಬಹುದು.

ಒಂದು ವೇಳೆ ನೀರಿನಿಂದ ಹೂಳು ತೆಗೆಯುವ ವ್ಯಚ್ಚ ದುಬಾರಿಯಾದರೆ, ಮಳೆಗಾಲ ಮುಗಿದ ನಂತರ ಚನ್ನಗಿರಿ, ಚಿತ್ರದುರ್ಗ ಮತ್ತು ದಾವಣಗೆರೆಯ ಸಮಸ್ತ ಜನರ ಒಪ್ಪಿಗೆಯನ್ನು ಪಡೆದು, ಸೂಳೆ ಕೆರೆಯ ಒಳ ಹರಿವನ್ನು ನಿಲ್ಲಿಸಿ ಕೆರೆಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿ ಜೆ.ಸಿ.ಬಿ ಗಳಿಂದ 4 ರಿಂದ 6 ತಿಂಗಳ ಅವಧಿಯಲ್ಲಿ ಸಾವಿರಾರು ಟ್ರ್ಯಾಕ್ಟರ್ /ಲಾರಿಗಳನ್ನು ಉಪಯೋಗಿಸಿ ಹೂಳನ್ನು ತೆಗೆಸ ಬಹುದು. ನಾವು 4 - 6 ತಿಂಗಳು ಕಷ್ಟ ಪಟ್ಟರೆ ಮುಂದೆ ನಮ್ಮ ಜೀವನ ಸುಖಕರವಾಗಿರುತ್ತದೆ.

ಸೂಳೆಕೆರೆಯನ್ನು ಉಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ವಾಗಿರುವುದರಿಂದ ಲಾರಿ/ಟ್ರ್ಯಾಕ್ಟರ್/ಜೆಸಿಬಿ ಮಾಲಿಈಕರನ್ನು ಚನ್ನಗಿರಿ/ಚಿತ್ರದುರ್ಗ/ದಾವಣಗೆರೆ ಸ್ಥಳದ ಸಮಸ್ತ ಜನರು ಮನ ಹೋಲಿಸಿ ಕಡಿಮೆ ಗುತ್ತಿಗೆ ಹಣವನ್ನು ಪಡೆಯುವಂತೆ ವಿನಂತಿಸಿಕೊಳ್ಳಬಹುದು.

ರೈತರರಿಗೆ ಕಡಿಮೆ ಬೆಲೆಯಲ್ಲಿ ಮಣ್ಣು ತಲುಪಿಸಲು ಜೆ.ಸಿ.ಬಿ ಬಾಡಿಗೆಯನ್ನು, ಸರ್ಕಾರ/ಸಂಘ ಸಂಸ್ಥೆಗಳು/ಮಠಗಳು/ಸ್ವಯಂ ಸೇವಕರು/ಚನ್ನಗಿರಿ,ಚಿತ್ರದುರ್ಗ,ದಾವಣಗೆರೆ ಸ್ಥಳಗಳ ಸಮಸ್ತ ಜನತೆ ದೇಣಿಗೆಯ ರೂಪದಲ್ಲಿ ಹಣವನ್ನು ನೀಡಬಹುದು ಅಥವಾ ತಾವೇ ಖುದ್ದಾಗಿ ಇಷ್ಟು ಜೆ.ಸಿ.ಬಿ ಗಳಿಗೆ ಇಷ್ಟು ದಿನಗಳ ಬಾಡಿಗೆಯನ್ನು ಅವರಿಗೆ ತಲುಪಿಸಬಹುದು.

ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ,

ಸೂಳೆಕೆರೆ ಉಳಿಸಿ ಮತ್ತು ಬೆಳೆಸಿ ಅಭಿಯಾನದಲ್ಲಿ ನಿಸ್ವಾರ್ಥದಿಂದ ಭಾಗವಯಿಸಿ.

ಇಷ್ಟವಾದರೆ ಕೆಳಗಿನ ವಾಟ್ಸಪ್ಪ್ ಲಿಂಕ್ ಕ್ಲಿಕ್ ಮಾಡಿ ನಮ್ಮೊಂದಿಗೆ ಕೈ ಜೋಡಿಸುವುದರೊಂದಿಗೆ ಬೆಂಬಲಿಸಿ.


ಸಾಧ್ಯವಾದಷ್ಟು ಸಮಸ್ತ ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ ಜನರಿಗೆ ತಲುಪುವವರೆಗೂ ಶೇರ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಾ
ನಿಮ್ಮ,
ಖಡ್ಗ ಸಂಘ - karnataka
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9972414251

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...