Thursday, March 22, 2018

ಖಡ್ಗ ಸಂಘ - ಸಂಘಟನೆಯ - ದ್ಯೇಯೋದ್ದೇಶಗಳು

ಕೃಷಿ/ತೋಟಗಾರಿಕೆ



1. ಕೃಷಿಗೆ 24X7 ವಿದ್ಯುತ್ ಸರಬರಾಜು ವ್ಯವಸ್ಥೆ.

§ ಗೂಳಿಯಿಂದ ವಿದ್ಯುತ್ ಉತ್ಪಾದಿಸುವುದು.
§  ಪ್ರತಿ ಹಳ್ಳಿಗಳಿಗೆ/ಪಟ್ಟಣಕ್ಕೆ ಬೇಕಾಗುವ ವಿದ್ಯುತ್ ಅನ್ನು ಗೋಮಾಳ/ಸರ್ಕಾರದ/ರೈತರಿಂದ ಜಮೀನನ್ನು ಕ್ರಯಕ್ಕೆ ಪಡೆದು ಪ್ರತಿ ಹಳ್ಳಿಗಳಲ್ಲಿ/ಪಂಚಾಯತಿಗಳಲ್ಲಿ/ಪಟ್ಟಣದಲ್ಲಿ ಸೌರಶಕ್ತಿ /ವಾಯುಶಕ್ತಿ ಇಂದ ವಿದ್ಯುತ್ ಉತ್ಪಾದನೆ. ಇದರಿಂದ ವಿದ್ಯುತ್ ಸರಬರಾಜು ವ್ಯಚ್ಚವನ್ನು ಕಡಿತಗೊಳಿಸಬಹುದು ಹಾಗೂ ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು.
§ ಕೃಷಿ ಪಂಪ್ ಸೆಟ್ ಗಳಿಗೆ ಸೌರಶಕ್ತಿ ವಿದ್ಯುತ್ ಉಪಯೋಗಿಸಲು ರೈತರಿಗೆ ಸಬ್ಸಿಡಿ ಮೂಲಕ ಸೋಲಾರ್ ಪ್ಯಾನೆಲ್ ವಿತರಣೆ.
§ ಸಮುದ್ರದ ತೀರಗಳಲ್ಲಿ ವಾಯುಶಕ್ತಿ ಹೇರಳವಾಗಿರುವುದರಿಂದ, ವಿಂಡ್ ಮಿಲ್ ಗಳ ಮೂಲಕ ವಿದ್ಯುತ್ ಉತ್ಪಾದನೆ.
§ ಜೈವಿಕ ಇಂದನಗಳ ಬೆಳೆಗಳಿಗೆ ಅಥವಾ ಕೃಷಿಗೆ ಉತ್ತೇಜನ.



2. ಪ್ರತಿ ಹಳ್ಳಿ/ಪಟ್ಟಣಗಳಿಗೆ ಕುಡಿಯುವ ಹಾಗೂ ಕೃಷಿಗೆ 24X7 ನೀರು ಸರಬರಾಜು ವ್ಯವಸ್ಥೆ
§ ವೈಜ್ಞಾನಿಕವಾಗಿ ರಾಜ್ಯದ/ಜಿಲ್ಲೆಯ/ತಾಲ್ಲೂಕಿನ/ಹಳ್ಳಿಗಳ ಎಲ್ಲಾ ಕೆರೆಗಳ ಜೋಡಣೆ.
§ ಗೋಮಾಳ/ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಆಳವಾದ ಗೋಕಟ್ಟೆಗಳು/ಕೆರೆಗಳ ನಿರ್ಮಾಣ.
§ ರೈತರ ಪ್ರತೀ ಜಮೀನುಗಳಲ್ಲಿ ವೈಜ್ಞಾನಿಕವದ ಆಳವಾದ ಮಳೆ ನೀರಿನ ಇಂಗು ಗುಂಡಿಗಳ ನಿರ್ಮಾಣ.
§ ಹಳ್ಳಿಗಳ/ಪಟ್ಟಣಗಳ ಪ್ರತೀ ಮನೆಯ ಮೇಲ್ಚಾವಣಿಯ ಮಳೆಯ ನೀರನ್ನು ಅಂಡರ್ ಗ್ರೌಂಡ್ ವ್ಯವಸ್ಥೆಯ ಮೂಲಕ ಒಂದು ಕಡೆ ಹಿಂಗಿಸುವುದು.
§ ರಸ್ತೆಗಳ ಬದಿಗಳಲ್ಲಿ ಮಳೆ ನೀರಿನ ಕೊಯ್ಲು ವ್ಯವಸ್ಥೆ.
§ ಸಾದ್ಯವಾದ ಪ್ರದೇಶದಲ್ಲಿ ಹೇರಳವಾಗಿರುವ ಸಮುದ್ರದ ನೀರನ್ನು "ಗ್ರಾಫೀನ್ ವಾಟರ್ ಪ್ಯೂರಿಫಿಕೇಷನ್" ತಂತ್ರಜ್ಞಾನದ ಮೂಲಕ ಶುದ್ಧಿಗೊಳಿಸಿ ಕೃಷಿಗೆ/ಕುಡಿಯುವುದಕ್ಕೆ ಬಳಸಿಕೊಳ್ಳುವುದು.
§ ಕೃಷಿ ಅಥವಾ ಕುಡಿಯುವ ನೀರಿಗೆ ಬೋರ್ ವೆಲ್ ತೆಗೆಸಲು ತೆಗೆಸಲು ವೈಜ್ಞಾನಿಕ ಕ್ರಮ.

3. ಕೃಷಿಗೆ ಕಾರ್ಮಿಕರ/ನೌಕರರ ಸಮಸ್ಸೆ
§ ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಆಯಾ ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ಯಂತ್ರೋಪಕರಣಗಳು ಕಡಿಮೆ ಬೆಲೆಗೆ ಬಾಡಿಗೆಗೆ ದೊರೆಯುತ್ತವೆ.  ಉದಾ: ಭತ್ತ, ರಾಗಿ, ಜೋಳ, ಸೂರ್ಯಕಾಂತಿ, ಆಲೂಗಡ್ಡೆ, ತೆಂಗಿನಕಾಯಿ, ಅಡಿಕೆ, ಬಾಳೆ , ತಂತಿ ಕಂಬ, ಟ್ರನ್ಚ್,  ಇತ್ಯಾದಿ ಹಸನು/ಬಿತ್ತನೆ/ಕಟಾವು/ನೆಡುವ ಯಂತ್ರಗಳು.
4. ರೈತರ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಕನಿಷ್ಠ ಬೆಲೆ ನಿಗದಿಪಡಿಸುವುದು.
§ ಪ್ರತೀ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರದ ಕೃಷಿ ಮಾರುಕಟ್ಟೆ ಸ್ಥಾಪನೆ, ಇಲ್ಲಿ ರೈತರ ಉತ್ಪನ್ನಗಳನ್ನು ಸರ್ಕಾರ ನಿರ್ಧರಿಸಿದ ಬೆಲೆಗೆ ಕೊಂಡು, ತಮ್ಮದೇ ಆದ ಸಾರಿಗೆಯ ವ್ಯವಸ್ಥೆಯ ಮೂಲಕ ಇತರೆ ಪಂಚಾಯತ್/ಪಟ್ಟಣ/ಜಿಲ್ಲೆ/ರಾಜ್ಯ ಗಳಿಗೆ ಸರಬರಾಜು ಮಾಡುವುದು.
§ ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರೈತ/ಕೃಷಿ ಉತ್ಪನ್ನಗಳಿಗೆ ( ತರಕಾರಿ, ಹಣ್ಣು, ಇತ್ಯಾದಿ ಬೆಳೆಗಳು) ಶೀತಲೀಕರಣ ಶೇಖರಣಾ ಕೇಂದ್ರ ವ್ಯವಸ್ಥೆ.
5. ಗ್ರಂಥಾಲಯ ವ್ಯವಸ್ಥೆ
§ ಪ್ರತೀ ಹಳ್ಳಿಗಳಲ್ಲಿ/ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅರೋಗ್ಯ/ಕೃಷಿಗೆ/ಮನರಂಜನೆಗೆ/ಜ್ಞಾನಕ್ಕೆ ಸಂಬಂದಿಸಿದ ಡಿಜಿಟಲ್ ಗ್ರಂಥಾಲಯದ ವ್ಯವಸ್ಥೆ
6. ಇನ್ಸ್ಟಂಟ್ ಲೋನ್ ಸೌಲಭ್ಯ
§ ರೈತರ ಜಮೀನು/ವಾರ್ಷಿಕ ಆದಾಯದ ಮೇಲೆ ಸಹಕಾರಿ ಬ್ಯಾಂಕ್ಗಳಿಂದ ಇನ್ಸ್ಟಂಟ್ ಲೋನ್ ವ್ಯವಸ್ಥೆ ಸೌಲಭ್ಯ.
§ ಸರ್ಕಾರೀ/ ಖಾಸಗಿ ನೌಕರರಿಗೆ ಅವರ ಮಾಸಿಕ/ವಾರ್ಷಿಕ ಆದಾಯದ ಆಧಾರದ ಮೇಲೆ ಇನ್ಸ್ಟಂಟ್ ಲೋನ್ ಸೌಲಭ್ಯ

7. ಕೃಷಿ ಹೆಲ್ತ್ ಕಾರ್ಡ್ ವಿತರಣೆ
§ ಪ್ರತೀ ರೈತರಿಗೆ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆಯ ಆಧಾರದಮೇಲೆ "ಕೃಷಿ ಹೆಲ್ತ್ ಕಾರ್ಡ್" ನೀಡಲಾಗುವುದು.
§  ರೈತರು ಬೆಳೆಯುವ ಪ್ರತಿ ಬೆಳೆಗಳಿಗೆ ವಿಮೆ ಸೌಲಭ್ಯ ಒದಗಿಸಲಾಗುವುದು.
§ ಕೃಷಿಗೆ ಮುಂಗಡ ಬೆಳೆ ಸಾಲದ ಸೌಲಭ್ಯ - ರೈತರು ಫಸಲು ಬಂದ ನಂತರ ಸರ್ಕಾರೀ ಕೃಷಿ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳನ್ನು ಮಾರುವಾಗ ಇದನ್ನು ಹಿಂದಿರುಗಿಸಬಹುದು.
8. ರೈತರಿಗೆ ಪಿಂಚಣಿ ಸೌಲಭ್ಯ
§ ೩/೬/೧೨ ತಿಂಗಳಿಗೊಮ್ಮೆ ಕೃಷಿಕರು ಪಿಂಚಣಿ ವಿಮೆಯನ್ನು ೬೦ ವರ್ಷ ವಯಸ್ಸಿನವರಗೆ ತುಂಬಬೇಕು, ೬೦ ವರ್ಷದ ನಂತರ ಪ್ರತಿ ತಿಂಗಳು ಪಿಂಚಣಿ ಸೌಲಭ್ಯ ವಿಮೆಯ ಆಧಾರದಮೇಲೆ ದೊರೆಯುತ್ತದೆ.
ಉತ್ಕೃಷ್ಟ ಶಿಕ್ಷಣ ವ್ಯವಸ್ಥೆ



9. ಮುಚ್ಚುತ್ತಿರುವ ಸರ್ಕಾರಿ ಶಾಲೆ/ ಕಾಲೇಜುಗಳು
§ ಉತ್ಕೃಷ್ಟ ಗುಣಮಟ್ಟದ ಶಾಲಾ/ಕಾಲೇಜಿನ ಕಟ್ಟಡ ವ್ಯವಸ್ಥೆ
§ ಎಲ್ಲಾ ಶಾಲಾ ಕಾಲೇಜುಗಳಲ್ಲಿ CBSC /NCERT ಸಿಲ್ಲಬಸ್ ಪಠ್ಯ ಅಳವಡಿಕೆ. ( ಆಧುನಿಕ ಮತ್ತು ಜೀವನಕ್ಕೆ ಉಪಯೋಗವಾಗುವ ಶಿಕ್ಷಣಕ್ಕೆ ಒತ್ತು)
§ ಎಲ್ಲಾ ಸರ್ಕಾರಿ ಶಾಲೆ/ಕಾಲೇಜು ಗಳಲ್ಲಿ ಸಾರಿಗೆ ವ್ಯವಸ್ಥೆ.
§ ಆಧುನಿಕ ಶಿಕ್ಷಣದ ಜೊತೆ ಪರಿಸರ ಮತ್ತು ಸಮಾಜದ ಕಳಕಳಿಯ ಶಿಕ್ಷಣ.
§ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಅಂತರ್ಜಾಲ ವ್ಯವಸ್ಥೆ.
§ ಜಾತಿಯನ್ನು ಬಿಟ್ಟು ಪೋಷಕರ ಆರ್ಥಿಕತೆಯ ಆಧಾರದ ಮೇಲೆ ವಿದ್ಯಾರ್ಥಿಗಳ ಸ್ಕಾಲರ್ಷಿಪ್ ಅನ್ನು ನಿರ್ಧರಿಸಲಾಗುತ್ತದೆ
§ ಪ್ರತಿಯೊಂದು ಗ್ರಾಮಪಂಚಾಯತಿ/ತಾಲ್ಲೂಕ್/ಜಿಲ್ಲೆ  ವ್ಯಾಪ್ತಿಯಲ್ಲಿ  ಬರುವ ಶಾಲೆಗಳಿಗೆ/ಕಾಲೇಜುಗಳಿಗೆ ತಿಂಗಳಲ್ಲಿ ಒಮ್ಮೆ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಗುರುತಿಸಲು ಎಕ್ಸಿಬಿಷನ್ ಏರ್ಪಡಿಸಲಾಗುವುದು.
§ ಉದಾ: ಪಠ್ಯ/ಕೃಷಿಗೆ/ಟೆಕ್ನಾಲಾಜಿಗೆ/ವೈದ್ಯಕೀಯ/ಮನರಂಜನೆ/ಪ್ರಾಜೆಕ್ಟ್ಸ್ ಇತ್ಯಾದಿ ವಿಷಯಗಳಿಗೆ  ಸಂಬಂಧಿಸಿದ ಚಟುವಟಿಕೆಗಳು.
§ ದೇಸಿ ಆಟಗಳಿಗೆ ಉತ್ತೇಜನ
ಉತ್ತಮ ಆರೋಗ್ಯ ವ್ಯವಸ್ಥೆ



10. ಉತ್ತಮ ಆಸ್ಪತ್ರೆಗಳು

§ ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಆಸ್ಪತ್ರೆಗಳ ನಿರ್ಮಾಣ. ಉದಾ: ಸಾಮಾನ್ಯಕಾಯಿಲೆ/ಬ್ಲಡ್ ಟೆಸ್ಟ್/ಬಿಪಿ/ಡಯಾಬಿಟಿಕ್/ENT ಇತ್ಯಾದಿ ಪರೀಕ್ಷೆ/ಚಿಕಿತ್ಸೆ ವ್ಯವಸ್ಥೆ.
§ ಪ್ರತಿ ಜಿಲ್ಲೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಉದಾ: ಮೂಳೆ/ಹೃದಯ/ಮೆದುಳು/ ಅಥವಾ ಯಾವುದೇ ಶಸ್ತ್ರ ಚಿಕಿತ್ಸೆ.
§ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಮೆಡಿಕಲ್ ಮತ್ತು ಲೈಫ್ ಇನ್ಶೂರೆನ್ಸ್ ಬಾಂಡ್ ಲಭ್ಯತೆ.
§ ಪ್ರತೀ ಗ್ರಾಮಪಂಚಾಯತ್ಅ ವ್ಯಾಪ್ತಿಯಲ್ಲಿ ಆರೋಗ್ಯಕ್ಕೆ ಸಂಬಂದಿಸಿದ ಉಚಿತ ಸಲಹಾ ಕೇಂದ್ರಗಳು.
§ ಕುಟುಂಬದ ಆರ್ಥಿಕ ಆಧಾರದ ಮೇಲೆ  ಹೆಲ್ತ್ ಕಾರ್ಡ್ ಸೌಲಭ್ಯ
§ ಪ್ರತೀ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರೀ "ವೈದ್ಯಕೀಯ ಔಷಧ ಅಂಗಡಿ" ವ್ಯವಸ್ಥೆ





ಸಂಪೂರ್ಣ ಪಾರದರ್ಶಕ ಆಡಳಿತ ವ್ಯವಸ್ಥೆ


11. ಸಂಪೂರ್ಣ ಪಾರದರ್ಶಕ ಆಡಳಿತ ವ್ಯವಸ್ಥೆ,


§ ಜನ ಪ್ರತಿನಿಧಿಗಳು ಯಾವುದೇ ನೀರಿಕ್ಷೆ ಇಲ್ಲದೆ ಸರ್ಕಾರದ ಮಾಸಿಕ ವೇತನಕ್ಕೆ ಮಾತ್ರ ತಮ್ಮ ಕ್ಷೇತ್ರದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದು ಮತ್ತು 24X7 ಜನರ ಸಂಪರ್ಕದಲ್ಲಿರುತ್ತಾರೆ
§ ಪ್ರತಿ ಸರ್ಕಾರೀ ವಿಭಾಗದಲ್ಲೂ ಮೊಬೈಲ್ ಆಪ್/ವೆಬ್ಸೈಟ್/ಟೆಲಿವಿಷನ್ ಮೂಲಕ ಉದ್ಯೋಗ/ಟೆಂಡರ್/ಪ್ರಾಜೆಕ್ಟ್ಸ್/ಕಾಮಗಾರಿಯ ಸ್ಥಿತಿ/ನೇಮಕಾತಿ/ಖರ್ಚು ವೆಚ್ಚಗಳ ಪ್ರತಿಯೊಂದು ಸರ್ಕಾರೀ ಯೋಜನೆಗಳ ಮಾಹಿತಿ (ನೇರಪ್ರಸಾರದಲ್ಲಿ) ದೊರೆಯುತ್ತದೆ.
§ ಅವ್ಯವಹಾರ/ ಭ್ರಷ್ಟಾಚಾರ ಕಂಡುಬಂದಲ್ಲಿ ಜನಸಾಮಾನ್ಯರು ಟಿಕೇಟಿಂಗ್ ಸಿಸ್ಟಮ್ ಮೂಲಕ ತಮ್ಮ ಕಂಪ್ಲೇಂಟ್ ಲಾಡ್ಜ್ ಮಾಡಬಹುದು.


12. ಭ್ರಷ್ಟಾಚಾರ ಮುಕ್ತ  ವ್ಯವಸ್ಥೆ
§ ಸ್ವಚ್ಛ/ಸುರಕ್ಷಿತ/ಸಶಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ಜನ ಸಾಮಾನ್ಯ/ನೌಕರರು ಸಮಾಜದ ಕಾವಲುಗಾರರು. ಪ್ರತಿಯೊಂದು ಸರ್ಕಾರಿ/ಪ್ರೈವೇಟ್/ಸಾರ್ವಜನಿಕ ಸ್ಥಳ/ಕಛೇರಿ/ವಿಭಾಗ ಗಳಲ್ಲಿ ಎಲ್ಲಾ ನೌಕರರು/ವ್ಯಕ್ತಿಗಳು ತಮ್ಮ ಸಹೋದ್ಯೋಗಿಗಳ/ಕೆಳಗಿನ/ಮೇಲಿನ ಅಧಿಕಾರಿಗಳ/ವಿಭಾಗದ ಕಾರ್ಯದಕ್ಷತೆ/ವ್ಯಕ್ತಿತ್ವ/ಅವ್ಯವಹಾರ/ ಗಳ ಬಗ್ಗೆ ತಿಳಿದಿರುತ್ತಾರೆ. ಈ ಅವ್ಯವಹಾರವನ್ನು ಸರ್ಕಾರದ ಗಮನಕ್ಕೆ ತರುವ ಯಾವುದೇ ನೌಕರ/ವ್ಯಕ್ತಿಗೆ ಉದ್ಯೋಗ ಬಡ್ತಿ ಹಾಗು ಅವ್ಯವಹಾರ ನಡೆಸಿದ ಅಧಿಕಾರಿಯ ಪೂರ್ಣ ಮೊತ್ತದ ೨೫% ಹಣವನ್ನು ಅವ್ಯವಹಾರವನ್ನು ಬಯಲು ಮಾಡಿದ ವ್ಯಕ್ತಿಗೆ ಬಹುಮಾನ ರೂಪದಲ್ಲಿ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಯೇ ಭರಿಸಬೇಕು ಮತ್ತು ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಯ ಎಲ್ಲಾ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು.


13. ತೆರಿಗೆ ರಹಿತ ವ್ಯವಸ್ಥೆ
§ ಡಿಜಿಟಲ್ ವಹಿವಾಟಿಗೆ ಉತ್ತೇಜನ, ಕ್ರಮೇಣ ಪೇಪರ್ ಹಣವನ್ನು ಸಂಪೂರ್ಣ ನಿಲ್ಲಿಸಲಾಗುವುದು.
§ ಪ್ರತಿಯೊಬ್ಬರೊ ತಮ್ಮ ಬ್ಯಾಂಕ್ ಅಕೌಂಟ್ ಗಳಲ್ಲಿ "ಮಾಸ್ಟರ್" ಮತ್ತು "ಸ್ಲೇವ್"  ಅಕೌಂಟ್ ಗಳನ್ನು ಹೊಂದಿರುತ್ತಾರೆ. ಮಾಸ್ಟರ್ ಅಕೌಂಟ್ ನಲ್ಲಿ ತಮ್ಮ ಸಂಪೂರ್ಣ ಹಣ ಲಭ್ಯವಿರುತ್ತದೆ. "ಸ್ಲೇವ್" ಅಕೌಂಟ್ ನಲ್ಲಿ ತಮಗೆ ಬೇಕಾದಷ್ಟು ಹಣವನ್ನು ವರ್ಗಾಯಿಸಿಕೊಂಡು ವಹಿವಾಟು ಮಾಡಬಹುದು.
§ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುವುದು.
§ ತೆರಿಗೆಯ ಬದಲು ಪ್ರತಿ ವಹಿವಾಟಿಗೆ 1% ಹಣವನ್ನು ಸರ್ಕಾರದ ಬೊಕ್ಕಸಕ್ಕೆ ತೆಗೆದುಕೊಳ್ಳಲಾಗುವುದು.
§ ಇದರ ಮೂಲಕ ಭ್ರಷ್ಟಾಚಾರ/ತೆರಿಗೆ ವಂಚನೆ/ ಇತ್ಯಾದಿಗಳನ್ನು ಸಂಪೂರ್ಣವಾಗಿ ತಡೆಯಬಹುದು.
ಸರ್ಕಾರೀ ಕಛೇರಿಯ ಕೆಲಸಗಳು
14. ಜಿಲ್ಲಾ/ತಾಲ್ಲೂಕ್/ಜಿಲ್ಲಾ/ಗ್ರಾಮ ಪಂಚಾಯತ್ ಕಛೇರಿ ಕೆಲಸಗಳ ಸಮಸ್ಸೆ
§ ವೈಯುಕ್ತಿಕ/ವಿದ್ಯಾಭ್ಯಾಸ/ಕೃಷಿ/ವೈದ್ಯಕೀಯ/ ಪಹಣಿ/ಆದಾಯ/ವೈದ್ಯಕೀಯ/ವಂಶವೃಕ್ಷ/ ಜಮೀನು/ವಾಹನ/ಆಸ್ತಿ ಇತ್ಯಾದಿ ಇತರೇ ಯಾವುದೇ ವಿಷಯಕ್ಕೆ ಸಂಬಂದಿಸಿದ ಕಛೇರಿ ಕೆಲಸಗಳಿಗೆ ಕಾರ್ಪೊರೇಟ್ ಟಿಕೇಟಿಂಗ್ ಸಿಸ್ಟಮ್ ಅಳವಡಿಕೆ.
§ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬರೂ ಮೊಬೈಲ್ಆಫ್/ಕಂಪ್ಯೂಟರ್ ಮೂಲಕ ತಮ್ಮ ಕೆಲಸಗಳನ್ನು ಸುಲಭವಾಗಿ ಯಾವುದೇ ಖರ್ಚು/ಅವ್ಯವಹಾರ/ಕಮಿಷನ್/ಲಂಚ ಕೊಡದೆ ಮಾಡಿಕೊಳ್ಳಬಹುದು.
ಸ್ವಚ್ಛತೆ, ವ್ಯಾಪಾರ, ಸಾರಿಗೆ ಮತ್ತು ಸಂಪರ್ಕ
13 ಚರಂಡಿಗಳ ಹಾಗೂ ಒಣ/ಪ್ಲಾಸ್ಟಿಕ್/ಕೊಳೆಯದ ಕಸದ  ಅವ್ಯವಸ್ಥೆ
§ ಪ್ರತೀ ಹಳ್ಳಿ/ಪಟ್ಟಣ/ಜಿಲ್ಲೆ ಗಳಲ್ಲಿ ವೈಜ್ಞಾನಿಕ ಕೊಳವೆ ಚರಂಡಿಗಳ ವ್ಯವಸ್ಥೆ ಹಾಗು ಒಂದು ಕಡೆ ಕೊಳಚೆ ನೀರು ಇಂಗುವ ವ್ಯವಸ್ಥೆ.
§ ಕೊಳೆಯದ ತ್ಯಾಜ್ಯ ನಿರ್ವಹಣೆಗೆ ಕಾರ್ಮಿಕರ ನೇಮಕಾತಿ ಮತ್ತು ರೀಸೈಕ್ಲಿಂಗ್ ವ್ಯವಸ್ಥೆ

14 ವಾಣಿಜ್ಯ ಅಂಗಡಿಗಳ ಸಮಸ್ಸೆ.
§ ಪ್ರತೀ ತಾಲ್ಲೂಕ್/ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರೀ/ಎಫ್.ಡಿ.ಐ ಮೂಲಕ ವಾಣಿಜ್ಯ ಮಾಲ್ಗಳ ನಿರ್ಮಾಣ ಇಲ್ಲಿನ ಬೆಲೆ ಮಾರ್ಕೆಟ್ ಬೆಲೆಯಾಗಿದ್ದು ಎಲ್ಲ ಕಡೆಯಲ್ಲೂ ಒಂದೇ ಆಗಿರುತ್ತದೆ. ಇದರಿಂದ ಸ್ಥಳೀಯ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಉದಾ: ದಿನಸಿ ಸಾಮಾನುಗಳು, ದಿನಬಳಕೆ ವಸ್ತುಗಳು, ಕೃಷಿ ಸಾಮಗ್ರಿಗಳು, ಗೊಬ್ಬರ, ಕ್ರಿಮಿನಾಶಕಗಳು ದೇಶೀ/ವಿದೇಶಿ ವಸ್ತುಗಳು (ಇಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಕ್ಲಾತ್, ಪುಟ್ ವೀರ್ಸ್ ಇತ್ಯಾದಿ ).
§ ಒಂದು ಪಟ್ಟಣದ ಶಾಪಿಂಗ್ ಮಾಲ್ ನಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ದೊರಕುತ್ತವೆ.
15 ರಸ್ತೆಗಳ ವ್ಯವಸ್ಥೆ.
§ ಪ್ರತೀ ಗ್ರಾಮ/ಪಟ್ಟಣ/ಜಿಲ್ಲೆ/ರೈತರ ಜಮೀನು /ತೋಟಗಳಿಗೆ ಉತ್ಕೃಷ್ಟ ರಸ್ತೆಗಳ ವ್ಯವಸ್ಥೆ ಹಾಗು ಹಾನಿಯಾದ ರಸ್ತೆಗಳ ದುರಸ್ತಿಯನ್ನು ಪ್ರತಿ ತಿಂಗಳು ಮಾನಿಟರ್ ಮಾಡಿ ಸರಿಪಡಿಸಲಾಗುವುದು. ರಸ್ತೆಗೆ ಹಾನಿಯಾಗದಂತೆ ನೀರಿನ ಪೈಪ್ಲೈನ್ಗಳಿಗೆ ಅಂಡರ್ಗ್ರೌಂಡ್ ವ್ಯವಸ್ಥೆ.
§ ರಸ್ತೆಯ ಟೋಲ್ ವ್ಯವಸ್ಥೆಯನ್ನು ತೆಗೆದು ಹಾಕಿ ವರ್ಷಕ್ಕೊಮ್ಮೆ ವಾಹನಗಳ ಮಾಲೀಕರಿಂದ ಇನ್ಶೂರೆನ್ಸ್ ರಿನ್ಯೂವಲ್ ಸಮಯದಲ್ಲಿ ಟೋಲ್ ಚಾರ್ಜ್ ಪಡೆಯಲಾಗುವುದು.
ಸಮಾಜ ಮತ್ತು ಪರಿಸರ ಕಾಳಜಿ
16 ಉಚಿತ ಕಾನ್ಫರೆನ್ಸ್ ಕಾಲ್ ಸಿಸ್ಟಮ್

§ ಪ್ರತೀ ಹಳ್ಳಿಗಳ/ಗ್ರಾಮ ಪಂಚಾಯತ್/ತಾಲೂಕ್/ಜಿಲ್ಲೆ ವ್ಯಾಪ್ತಿಯಲ್ಲಿ ಕಾನ್ಫರೆನ್ಸ್ ಕಾಲ್ ವ್ಯವಸ್ಥೆ. ಈ ಮೂಲಕ ರೈತರು ತಮ್ಮ ಅನುಭವ/ಸಮಸ್ಸೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು.
§ ಪ್ರತಿ ದಿನ ಗ್ರಾಮಪಂಚಾಯತ್/ತಹಶೀಲ್ದಾರ್/ಕ್ಷೇತ್ರದ-MLA ೩೦ ನಿಮಿಷಗಳಕಾಲ ಕಾನ್ಫರೆನ್ಸ್ ಕಾಲ್ ಜಾಯಿನ್ ಹಾಗುತ್ತಾರೆ. ಸಮಯದಲ್ಲಿ ಜನರು ತಮ್ಮ ಕ್ಷೇತ್ರದ ಸಮಸ್ಸೆಗಳು, ಪರಿಹಾರಗಳು ಇತ್ಯಾದಿ ವಿಷಯಗಳನ್ನು ಹಂಚಿಕೊಳ್ಳಬಹುದು.
17 ಸರ್ಕಾರದ ಅನುದಾನಗಳ ಸದುಪಯೋಗ
§ ಜಾತಿಯ ಮೇಲೆ ಅವಲಂಬಿಸದೆ, ವ್ಯಕ್ತಿಯ ಆರ್ಥಿಕತೆಯ ಆಧಾರದ ಮೇಲೆ ಸರ್ಕಾರೀ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಉದಾ: ಕಾರ್/ಜೀಪ್/ ಹೊಂದಿರುವವರು/ವಾರ್ಷಿಕ ಆದಾಯ ೫ ಲಕ್ಷ ಉಳ್ಳವರು ಯಾವುದೇ ಸರ್ಕಾರೀ ಸೌಲಭ್ಯಗಳಿಗೆ ಅರ್ಹರಲ್ಲ.
18 ನಮ್ಮನ್ನೆಲ್ಲ ಕಾಯುವ ಯೋಧನಿಗೆ ಒಂದು ಕೃತಜ್ಞತೆ

§ ಮದುವೆಯಾದ ನವ ದಂಪತಿಗಳು "ಮ್ಯಾರೇಜ್ ಸರ್ಟಿಫಿಕೇಟ್" ಪಡೆಯುವಾಗ ನಮ್ಮ ದೇಶದ ಯೋಧರ ಸಹಾಯ ನಿಧಿಗೆ ಸಹಾಯ ಮಾಡುವುದು.
§ ವ್ಯಾವಹಾರಿಕ ವಹಿವಾಟುಗಳನ್ನು ಮಾಡುವಾಗ ೦.೦೧% ಅನ್ನು ಡೊನೇಷನ್ ರೂಪದಲ್ಲಿ ಯೋಧರ ಸಹಾಯ ನಿಧಿಗೆ ಕೊಡುವುದು.
§ ಸರ್ಕಾರೀ/ಪ್ರೈವೇಟ್/ಬಿಸಿನೆಸ್ ನೌಕರರ ಸ್ಯಾಲರಿ/ಕರೆಂಟ್ ಅಕೌಂಟ್ ನಿಂದ ಪ್ರತಿ ದಿನ ೫೦ ಪೈಸಗಳನ್ನು ಯೋಧರ ಸಹಾಯ ನಿಧಿಗೆ ಡೊನೇಟ್ ಮಾಡುವುದು.
§ ಬರ್ತ್ ಸರ್ಟಿಫಿಕೇಟ್ ವಿತರಿಸುವಾಗ ಯೋಧರ ನಿಧಿಗೆ ಸಹಾಯ ನಿಧಿಗೆ ಡೊನೇಟ್ ಮಾಡುವುದು
19. ಸಾಲುಮರಗಳ ತೆರವು/ ಕಡಿಯುವುದರ ಸಮಸ್ಸೆ
§ ಪ್ರತೀ ಹಳ್ಳಿ/ಪಟ್ಟಣ/ಜಿಲ್ಲೆಗಳ ವಾಹನ/ಜಾಮೀನು ರಸ್ತೆಗಳ ಬದಿಗಳಲ್ಲಿ ಹಣ್ಣಿನ/ಜೈವಿಕ ಇಂಧನಕ್ಕೆ ಬೇಕಾಗಿರುವ ಮರಗಳನ್ನು ಬೆಳೆಸುವುದು. ಇದರಿಂದ ಮರಗಳನ್ನು ಕಡಿಯುವುದರ ಬದಲು ಪ್ರತಿಯೊಬ್ಬರೂ ಸ್ವತಹ ತಾವೇ ಮರಗಳನ್ನು ಬೆಳೆಸಿ ಸಂರಕ್ಷಿಸುತ್ತಾರೆ
ಹೂಳಿನ ಸಮಸ್ಯೆ
20. ಶಾಂತಿ ಸಾಗರ ( ಸೂಳೆಕೆರೆ), ಕೋಗಲೂರು ಕೆರೆ , ಜೋಡಿ ತಿಮ್ಮಲಾಪುರ ಕೆರೆ, ಸಂಕಣ್ಣನ ಕೆರೆ, ಚನ್ನಗಿರಿ ಕೆರೆ, ಹಿರೇ ಹಳ್ಳ ಪಾಂಡುಮಟ್ಟಿ, ಇತ್ಯಾದಿ  - ಹೂಳಿನ ಸಮಸ್ಸೆ
§ ಶಾಂತಿ ಸಾಗರ ಕೆರೆಯು ಏಷ್ಯಾದಲ್ಲಿಯೇ ಅತೀ ವಿಸ್ತಾರವಾದ ಕೆರೆಯಾಗಿದ್ದು ಇಂದಿನದಿನಗಳಲ್ಲಿ ಹೂಳು ತುಂಬಿಕೊಂಡು ಬೇಸಿಗೆಯಲ್ಲಿ ಬತ್ತುವ ಸ್ಥಿತಿಗೆ ಬಂದಿರುತ್ತದೆ. ಈ ಕೆರೆಯ ನೀರನ್ನು ಚನ್ನಗಿರಿ, ಚಿತ್ರದುರ್ಗಕ್ಕೆ ಕುಡಿಯುಲು ಮತ್ತು ಕೃಷಿ/ತೋಟಗಳಿಗೆ ಜೀವನದಿಯಾಗಿರುತ್ತದೆ. ಚನ್ನಗಿರಿಯ ಜನಸಂಖ್ಯೆಯ ಪ್ರಮಾಣ ಸುಮಾರು ೩೦೦೦೦೦ ಇದ್ದು ಒಬ್ಬಬ್ಬರು ೧೦೦ ರೂ ಗಳನ್ನೂ ದೇಣಿಗೆಯಾಗಿ ನೀಡಿದರು ೩೦೦೦೦೦ X ೧೦೦ = ೩ ಕೋಟಿ ಸಂಗ್ರಹವಾಗುತ್ತದೆ ಇದರ ಜೊತೆಗೆ ಸರ್ಕಾರದ ಫಂಡ್ಸ್ ಉಪಯೋಗಿಸಿಕೊಂಡು ಕೆರೆಯ ಅಭಿವೃದ್ಧಿಯನ್ನು ಮಾಡಬಹುದಾಗಿದೆ.
§ ಇದೇ ಮಾದರಿಯಲ್ಲಿ ಹಳ್ಳಿಗರ ಮತ್ತು ಸರ್ಕಾರದ ನೆರವಿನಿಂದ  ಪ್ರತಿ ಹಳ್ಳಿಗಳ ಕೆರೆ/ಹೊಂಡ/ಹಳ್ಳ ಗಳನ್ನೂ ಅಭಿವೃದ್ಧಿ ಪಡಿಸಬಹುದು

**ಬನ್ನಿ ನಮ್ಮೆಲ್ಲ ಜಾತಿ, ಭೇದ, ಸ್ವಾರ್ಥ, ಧರ್ಮಕ್ಕೆ ಆಸ್ಪದೆ ಕೋಟದಡೆ ಉತ್ತಮ ವ್ಯವಸ್ಥೆಯನ್ನು ಸೃಷ್ಟಿಸೋಣ**

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...