Friday, March 23, 2018

ಮಾರ್ಚ್ 23 ಭಗತ್ ಸಿಂಗ್ , ರಾಜ್ಗುರು ಹಾಗೂ ಸುಕದೇವ್ ರವರು, ಹುತಾತ್ಮರಾದ ದಿನ

ಮಾರ್ಚ್ 23 ಭಗತ್ ಸಿಂಗ್ ಹುತಾತ್ಮರಾದ ದಿನ

ಇಂದು ಭಾರತದ ಮಹಾನ್ ಕ್ರಾಂತಿಕಾರರು ಹುತಾತ್ಮರಾದ ದಿನ. ಮಾರ್ಚ್ 23, 1931ರಂದು ಭಗತ್ ಸಿಂಗ್ ರನ್ನು ಗಲ್ಲಿಗೇರಿಸಿದಾಗ ಆತನಿಗಿನ್ನೂ 23ರ ಹರೆಯ. ಆತನ ಜೊತೆಗೆ ಸಹಚರರಾದ ರಾಜಗುರು ಮತ್ತು ಸುಖದೇವ್ ಕೂಡ ತಮ್ಮ ಪ್ರಾಣ ದೇಶಕ್ಕೆ ಅರ್ಪಿಸಿದರು. ಇವರ ಮರಣ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸಂಚಲನವನ್ನು ಉಂಟು ಮಾಡಿತು.

ಒಟ್ಟಿನಲ್ಲಿ ದೇಶ ಕಂಡ ಅಪ್ರತಿಮ ಕಾಂತ್ರಿಕಾರರಲ್ಲಿ ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಚಂದ್ರಶೇಖರ್ ಅಜಾದ್ ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಮತ್ತು ಸಹಚರರು ಜೀವದ ಹಂಗು ತೊರೆದು ಮಾಡಿದ ಹೋರಾಟ, ತ್ಯಾಗ, ಬಲಿದಾನ ಚಿರಸ್ಮರಣೀಯ.

ಯುವ ಹೋರಾಟಗಾರ✍️
ಶಿವಕುಮಾರ ಕೋಡ್ಲಿ ಹೊಡೆಬೀರನಳ್ಳಿ

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...