Thursday, March 22, 2018

ರಾಜಕೀಯ ಪಕ್ಷಗಳ ಸಹವಾಸ ಬೇಡ

• ಸ್ನೇಹಿತರೆ,
ಚನ್ನಗಿರಿ - 2018 ವಿಧಾನಸಭಾ ಚುನಾವಣೆ - ಸ್ವತಂತ್ರ ಅಭ್ಯರ್ಥಿ -
ರಘು ಬಿ ಆರ್.
ದಯವಿಟ್ಟು ಒಮ್ಮೆ ಓದಬೇಕಾಗಿ ತಮ್ಮಲ್ಲಿ ವಿನಂತಿ.
• ಎಲ್ಲರಿಗು ಯುಗಾದಿ ಹಬ್ಬದ ಶುಭಾಶಯಗಳು.
• “ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.”
•“ಹಾಗೆಯೇ, ಯುಗ ಯುಗಗಳೇ ಕಳೆದರು ನಾವೆಲ್ಲರೂ ಹೊಸ ಹುರುಪಿನಿಂದ ಹೊಸ ಹೊಸ ಯೋಚನೆಗಳಿಂದ ಪ್ರತಿ ದಿನವೂ ಹೊಸತನವೆಂಬ ಯುಗಾದಿಯನ್ನು ಆಚರಿಸೋಣ. “
•ನಾನು ಎನ್ನುವ ಪದ ಬಳಸುತ್ತಿದ್ದೇನೆ, ಏಕೆಂದ್ರೆ ನನ್ನ ಬಗ್ಗೆ ಎಲ್ಲರಿಗು ಸ್ಪಷ್ಟ ಸಂದೇಶ್ ನೀಡಬೇಕು ಎನ್ನುವ ಉದ್ದೇಶದಿಂದ.
•ತಮ್ಮ ಎಲ್ಲ ಅಭಿಪ್ರಾಯಗಳಿಗೆ ಧನ್ಯವಾದಗಳು. DATE-16-03-2018 ರಂದು ಚನ್ನಗಿರಿ ವಾಟ್ಸಪ್ಪ್ ಗ್ರೂಪ್ ವೋಟಿಂಗ್ ಫಲಿತಾಂಶ ವೋಟಿಂಗ್ ಶೇಕಡಾವಾರು 27% ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ಚನ್ನಗಿರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಷಿಸಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ 3 ವಾಟ್ಸಪ್ಪ್ ಗ್ರೂಪ್ ಗಳಲ್ಲಿ ವೋಟಿಂಗ್ ಮಾಡುವುದರ ಮೂಲಕ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ದಯವಿಟ್ಟು ಒಮ್ಮೆ ಕೆಳಗಿನ ಫಲಿತಾಂಶವನ್ನು ನೋಡಬೇಕಾಗಿ ವಿನಂತಿ.

ನನಗೆ ಇಂದು ನಾವೆಲ್ಲರೂ ಚಿಕ್ಕ ವಯಸ್ಸಿನಲ್ಲಿ ಕಲಿತ "ಪುಣ್ಯ ಕೋಟಿಯ" ಪದ್ಯವು ನೆನಪಾಗುತ್ತಿದೆ.

ರಾಜಕೀಯ ಅಥವಾ ಪ್ರಜಾಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಆದರೆ ನಾವು ( ಟೀಮ್ ) ಕೆಲವು ಮಾತುಗಳನ್ನು ಚನ್ನಗಿರಿಯ ಹಳ್ಳಿಗಳನ್ನು ಮಾತು ಕಾಲೇಜಿನ ಯುವಕರನ್ನು ಭೇಟಿ ಮಾಡಿ ಕೊಟ್ಟಿಯುತ್ತೇವೆ. ಆದ್ದರಿಂದ ಕೊಟ್ಟ ಮಾತುಗಳಿಗೆ ತಪ್ಪದಂತೆ ನಡೆಯುವುದು ನಮ್ಮ ಧರ್ಮ. ಪುಣ್ಯ ಕೋಟಿಯ ನೀತಿಯನ್ನು ಪಾಲಿಸು ಎಂದು ನನ್ನ ಮನಸ್ಸು ಕಾಡುತ್ತಿದೆ.

ಆದ್ದರಿಂದಈ ನಿರ್ಧಾರಕ್ಕೆ ಬಂದಿರಲಾಗುತ್ತದೆ.ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಹಾಗು ಎಲ್ಲರು ಈ ನಿರ್ಧಾರಕ್ಕೆ ಒಮ್ಮನಸ್ಸಿನಿಂದ ಸಮ್ಮತಿ ನೀಡುತ್ತೀರೆಂದು ನಂಬಿರುತ್ತೇನೆ.

ಇರುವ ವ್ಯವಸ್ಥೆಯನ್ನು ಎಲ್ಲರು ಸೇರಿ ಬದಲಾಯಿಸೋಣ. ಇದಕ್ಕೆಲ್ಲ ನಿಮ್ಮ ಸಹಕಾರ ಅತ್ಯಗತ್ಯ.
ಇಂದಿನಿಂದ ನಾನು "ಒನ್ ಮ್ಯಾನ್ ಆರ್ಮಿ" ಸಿದ್ದಾಂತವನ್ನು ಪಾಲಿಸಲು ನಿರ್ಧರಿಸುತ್ತೇನೆ ಆಸಕ್ತಿಯುಳ್ಳವರು ನಮ್ಮೊಂದಿಗೆ ಕೈಜೋಡಿಸಬಹುದು.

"ಒನ್ ಮ್ಯಾನ್ ಆರ್ಮಿ ಸಿದ್ದಾಂತ" - ಎಲ್ಲಿಯವರೆಗೂ ನಮ್ಮ ಆತ್ಮ ಪರಿಶುದ್ಧವಾಗಿರುವುದೋ, ನಾವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಅಚಲವಾದ ನಂಬಿಕೆಯಿರುವುದೋ, ಅಲ್ಲಿಯವರೆಗೆ ಇಡೀ ಪ್ರಪಂಚವೇನಮ್ಮೊಳಗೇ ಒಂದು ಶಕ್ತಿಯಾಗಿ ಅಡಗಿರುತ್ತದೆ. ಈ "ಒನ್ ಮ್ಯಾನ್ ಆರ್ಮಿ " ನಿಮ್ಮ ಆತ್ಮದಲ್ಲಿಯೂ ಅಡಗಿದ್ದರೆ ನಮ್ಮೊಂದಿಗೆ ಕೈಜೋಡಿಸಿ.

ಅಸಾಧ್ಯವಾದುದು ಯಾವುದು ಇಲ್ಲ, ಇಂದಿನಿಂದ ಹೊಸ ಇತಿಹಾಸವನ್ನು ಎಲ್ಲರು ಸೇರಿ ಬರೆಯೋಣ.
ಇಂದು ನಾವು ಇಟ್ಟಿರುವ ಹೆಜ್ಜೆಯನ್ನು ಹಿಂದೆ ತೆಗೆದರೆ ಇತಿಹಾಸ ನಮ್ಮನ್ನು ಇಂದಿಗೂ ಕ್ಷಮಿಸುವುದಿಲ್ಲ.

•"ಒನ್ ಮ್ಯಾನ್ ಆರ್ಮಿ" ಯಾವುದೇ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಾಗಿರುವುದಿಲ್ಲ. ಇವನು ಪ್ರತಿಯೊಬ್ಬರ ಮನಸಿನಲ್ಲೂ ಅಡಗಿರುವ ಯೋಧನಾಗಿರುತ್ತಾನೆ.
•ದಯವಿಟ್ಟು ನಾನು ಸ್ವಾರ್ಥಿ ಅಥವಾ ಅಧಿಕಾರದ ಆಸೆಗೆ ಇಲ್ಲಿ ಬಂದಿದ್ದೇನೆ ಎಂದು ದಯವಿಟ್ಟು ತಿಳಿಯಬೇಡಿ.

•2008 ರಲ್ಲಿ ಸಮಾನ ಮನಸ್ಸು ಉಳ್ಳ ಸ್ನೇಹಿತರೆಲ್ಲರು ಸೇರಿ ಖಡ್ಗ ಯುವಕರ ಸಂಘ ಎನ್ನುವ ಏನ್.ಜಿ.ಓ ಸ್ಥಾಪನೆ ಮಾಡಿದೆವು. ನಮಗೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ.
•ನಾನು ಪ್ರಜಾಕೀಯಕ್ಕೆ ಬಂದ ಉದ್ದೇಶ ನಮ್ಮ ಸಂಘದ ಉದ್ದೇಶಗಳನ್ನು ನೆರವೇರಿಸಲೇ ಹೊರತು MLA ಆಗಬೇಕು ಅಥವಾ ಅಧಿಕಾರದ ಆಸೆಗಾಗಲಿ ಅಥವಾ ಯಾವುದೇ ಬೇರೊಂದು ದುರುದ್ದೇಶದಿಂದ ಅಲ್ಲ.
•ರಾಜಕೀಯ ಅಥವಾ ಪ್ರಜಾಕೀಯ ದಲ್ಲಿ ಆಸಕ್ತಿ ಇನ್ನ್ನು ನನಗೆ ಉಳಿದಿಲ್ಲ ಸ್ನೇಹಿತರೆ.
•ನಾವೆಲ್ಲರೂ ಇಂದು ಇಡುತ್ತಿರುವ ಹೆಜ್ಜೆ ರಾಜಕೀಯ/ಪ್ರಜಾಕೀಯವನ್ನು ಮೀರಿಸುವಂತದ್ದು.
•ಇಂದು ಮಾಡುವ ಕೆಲಸವನ್ನು ಈ ಕ್ಷಣವೇ ಮಾಡು, ನಾಳೆ ಮಾಡುವ ಕೆಲಸವನ್ನು ಇಂದೇ ಮಾಡು ಹಾಗು ನಾಳೆ ಎನ್ನುವವರ ಮನೆ ಹಾಳು ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವವನು ನಾನು.
•ಇಂದಿಗೂ ಎಂದೆಂದಿಗೂ ನಾನು ರಾಜಕೀಯ/ ಪ್ರಜಾಕೀಯ ಲೋಕಕ್ಕೆ ಬರಬಾರದೆಂದು ನಿರ್ಧರಿಸಿದ್ದೆ, ಆದರೆ ನಿನ್ನೆ ನಡೆದ ವಾಟ್ಸಪ್ಪ್ ಗ್ರೂಪ್ ನಲಿ ನಡೆದ ವೋಟಿಂಗ್ ನಲ್ಲಿ ಮೆಜಾರಿಟಿ ಸ್ವತಂತ್ರವಾಗಿ ನಿಲ್ಲಿ ಎನ್ನುವ ಫಲಿತಾಂಶ ಬಂದಿರುವುದರಿಂದ ನಿಮ್ಮೆಲ್ಲರಿಗೂ ನಮಸ್ಕರಿಸುತ್ತಾ 2018 ರ ಚನ್ನಗಿರಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ತ್ತಿಯಾಗಿ ಸ್ಪರ್ದಿಸಲು ನಿರ್ಧರಿಸಿರುತ್ತೇನೆ.

ತಮ್ಮೆಲ್ಲರ ಅಭಿಪ್ರಾಯಕ್ಕೆ ಅನಂತ ನಮಸ್ಕಾರಗಳು ಮುಂದಿನ ದಿನಗಳಲ್ಲಿ ಯಾವುದೇ ಸದಸ್ಯರು (ಉತ್ತಮ ಅಭ್ಯರ್ಥಿ) ನಮ್ಮ "KHADGA YUVAKARA SANGHA - ONE MAN ARMY ಇಂದ ಮುಂದೊಂದು ದಿನ ಯಾವುದೇ ಚುನಾವಣೆಗೆ ( ZP ಗ್ರಾಮಪಂಚಾಯತಿ ಇತ್ಯಾದಿ ) ಸ್ಪರ್ದಿಸಲು ಇಚ್ಛಿಸಿದರೆ ಖಂಡಿತ ಸಂಪೂರ್ಣ ಬೆಂಬಲವನ್ನು ಕೊಡುತ್ತೇವೆ.

•ನನ್ನ ಕನಸಿನ ಸಮಾಜವನ್ನು ಕಟ್ಟಲು ರಾಜಕೀಯ/ಪ್ರಜಾಕೀಯಕ್ಕೆ (ಪಕ್ಷಗಳನ್ನು )ಸೇರದೆ ನನ್ನ ಕೊನೆಯುಸಿರಿರುವ ವರೆಗೂ ಸ್ವತಂತ್ರ ಅಭ್ಯರ್ಥಿಯಾಗಿಯೇ ಪ್ರಯತ್ನಿಸುತ್ತೇನೆ.
•ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣಗೆ ರಾಜಕೀಯ ಪಕ್ಷಗಳೇ ಮಾರ್ಗವಲ್ಲ ಸಮಾನ ಮನಸುಳ್ಳ ನಿಷ್ಠಾವಂತ ವ್ಯಕ್ತಿಗಳು ಸೇರಿದರೆ ಸ್ವತಂತ್ರವಾಗಿ (ಅಣ್ಣ ಹಜಾರೆ ಯವರ ಅಭಿಪ್ರಾಯದಂತೆ ) ಸಮಾಜದಲ್ಲಿ ಉತ್ತಮ ಕ್ರಾಂತಿಯನ್ನು ಮಾಡಬಹುದು ಎಂದು ಎಲ್ಲರುಜೊತೆಯಾಗಿ ತೋರಿಸೋಣ.
•ಸಧ್ಯದಲ್ಲೇ ಮುಂದಿನ ಯೋಜನೆಗಳನ್ನು ನಿಮ್ಮ ಮುಂದೆ ಹೊತ್ತು ತರುತ್ತೇನೆ, ನಿಮ್ಮ ಅಭಿಪ್ರಾಯ, ಸಲಹೆಗಳಿಗೆ ಸದಾ ಸ್ವಾಗತ. ನನ್ನನು ನಿಮ್ಮ ಒಬ್ಬ ಉತ್ತಮ ಗೆಳೆಯನಾಗಿ ನೋಡಿ, ನನ್ನಿಂದ ತಿಳಿಯದೆಯಾವುದೇ ತಪ್ಪಾದರೆ ಸರಿ ದಾರಿಗೆ ತನ್ನಿ ಎಂದು ತಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತಾ.
ನಮ್ಮ ನಡೆ ಇಷ್ಟವಾದರೆ ಕೆಳಗಿನ ವಾಟ್ಸಪ್ ಲಿಂಕ್ ಜಾಯಿನ್ ಹಾಗುವುದರ ಮೂಲಕ ಬಂಬಲಿಸಿ.
ಸೋಲಿನಲ್ಲಿಯೂ ಗೆಲುವಿನ ನಗೆಯನ್ನು ಬೀರುವ.
ನಿಮ್ಮ ಪ್ರೀತಿಯ,
ರಘು ಬಿ ರ್
CHANNAGIRI..
🎯FINAL RESULT🎯
ಚನ್ನಗಿರಿ ಗ್ರೂಪ್೧ (೧೮೫ )
ಚನ್ನಗಿರಿ ಗ್ರೂಪ್೨ (೬೮)
ಚನ್ನಗಿರಿ ಲೇಡಿಸ್ ಗ್ರೂಪ್ ೩ (೧೫)
೩ ಗ್ರೂಪ್ ಸೇರಿಸಿ.
ಪ್ರಜಾಕೀಯ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ - 33 + ೫ + ೦ = ೩೮
ಸ್ವತಂತ್ರ ಅಭ್ಯರ್ಥಿಯಾಗಿ
ಬೇಡ - 13 + ೧ + ೦= ೧೪
ರಾಜಕೀಯವೇ ಬೇಡ -
11 + ೮ + ೦= ೧೯
ಒಟ್ಟು ಮತದಾರರು -
೧೮೫ + ೬೮ + ೧೫ = ೨೬೮
VOTE ಮಾಡಿರುವವರು - ೭೧
ಒಟ್ಟ ಶೇಕಡಾ ಮತದಾನ - 2೬.೪೯%
One Man Army ತಂಡದ ಸದಸ್ಯರ ಸಂಖೆ - 71

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...