Thursday, March 22, 2018

ಖಡ್ಗ ಸಂಘ - ನಿಧಿ ಸಂಗ್ರಹಣೆ - ಸದುಪಯೋಗ

ಸ್ನೇಹಿತರೇ,
ಪ್ರತಿಯೊಬ್ಬರೂ ಪ್ರಶ್ನಿಸುತ್ತಿದ್ದರು ಸಂಘಕ್ಕೆ ಹಣ ಹೇಗೆ ಬರುತ್ತದೆ ಮತ್ತು ಸಂಘದ ಚಟುವಟಿಕೆಗಳನ್ನು ಹೇಗೆ ನಡೆಸಿಕೊಂಡು ಹೋಗುವುದು ಎಂದು. ದಯವಿಟ್ಟು ಕೆಳಗಿನ ವಿಷಯವನ್ನು ತಪ್ಪದೇ ಓದಬೇಕಾಗಿ ವಿನಂತಿ.

ದಯವಿಟ್ಟು ಗಮನಿಸಿ, ನಾವು ಇಲ್ಲಿ ಯಾರೂ ಯಾರನ್ನು ಭಿಕ್ಷೆ ಬೇಡುತ್ತಿಲ್ಲ ಅಥವಾ ನಮ್ಮ ಸ್ವಾರ್ಥಕ್ಕಾಗಿ ಅಂಗಲಾಚುತ್ತಿಲ್ಲ, ಸಾಮಾಜಿಕ ಕಾಳಜಿ ಉಳ್ಳವರಿಂದ ಉತ್ತಮ ಸಮಾಜಕ್ಕಾಗಿ ಅವರೇ ಸ್ವಯಂ ಪ್ರೇರಿತರಾಗಿ ಕೆಳಗಿನ ವಿನಂತಿಯನ್ನು ಪುರಸ್ಕರಿಸಿ ಅವರ ಮೂಲಕವೇ ಸಮಾಜಕ್ಕೆ ಅವರ ಕಾಣಿಕೆಯನ್ನು ತಲುಪಿಸುವ ಒಂದು ಸಣ್ಣ ಪ್ರಯತ್ನವಷ್ಟೇ.

ಖಡ್ಗ ಸಂಘವು ಎಂದಿಗೂ ಯಾರಿಂದಲೂ ಹಣವನ್ನು ಬಯಸುವುದಿಲ್ಲ. ಸ್ವಯಂ ಸೇವಕರು ತಮ್ಮ ಹಣವನ್ನು ತಾವೇ ಸಂಗ್ರಹಿಸಿ ( ಬೇರೆಯವರಿಂದ ಪಡೆಯುವಂತಿಲ್ಲ ) ತಾವೇ ಸಾಮಾಜಿಕ ಕೆಲಸಗಳಿಗೆ ತಮ್ಮ ಮೂಲಕವೇ ಬಳಸಿಕೊಳ್ಳುವುದು ನಮ್ಮ ಧ್ಯೇಯ.

ಒಂದು ವೇಳೆ ಯಾರಾದರೂ ಸಂಘದ ಹೆಸರಿನಲ್ಲಿ ಹಣವನ್ನು ವೈಯಕ್ತಿಕವಾಗಿ ಸಂಗ್ರಹಿಸಿದರೆ ದಯವಿಟ್ಟು ತಕ್ಷಣವೇ ಸಂಘದ ಸ್ವಯಂ ಸೇವಕರಿಗೆ ಫೋನ್/ಇಮೇಲ್/ಲೆಟರ್ ಮೂಲಕ ತಿಳಿಸಬೇಕಾಗಿ ವಿನಂತಿ.

ನಮ್ಮದು ಪಾರದರ್ಶಕ ಮತ್ತು ಹಣದ ಬೇಡಿಕೆಯಿಲ್ಲದೆ ಸ್ವಯಂ ಸೇವಕರ ನೆರವಿನಿಂದ ಸಾಮಾಜಿಕ ಕಾರ್ಯಗಳನ್ನು ಮಾಡುವಂತಹ ಸಂಸ್ಥೆಯಾಗಿರುತ್ತದೆ.

ಸಂಘದ ಲೆಕ್ಕಾಚಾರಗಳು 24X7 ಗಂಟೆಯೂ ಆನ್ಲೈನ್ ನಲ್ಲಿ ಲಭ್ಯವಿರುತ್ತವೆ.

ಸಂಘದ ಹಣಕಾಸಿನ ವ್ಯವಸ್ಥೆ ಕೆಳಗಿನ ರೀತಿಯಲ್ಲಿ ಇರುತ್ತದೆ
1. ಸಂಘಕ್ಕೆ ಸರ್ಕಾರದಿಂದ ಬರುವ ಅನುದಾನವನ್ನು ಪ್ರತೀ ವರ್ಷ ಕರ್ನಾಟಕದ ವೀರ ಯೋಧರು ಮರಣ ಒಪ್ಪಿದರೆ ಅಂಥವರ ಕುಟುಂಬಕ್ಕೆ ತಲುಪಿಸಲಾಗುವುದು ಅಥವಾ "ಭಾರತೀಯ ಸೈನಿಕರ ನಿಧಿಗೆ ತಲುಪಿಸಲಾಗುವುದು ".

2. ಸಾಮಾಜಿಕ ಕಾಳಜಿ ಉಳ್ಳ ವ್ಯಕ್ತಿಗಳು ತಮ್ಮ ಮನೆಯಲ್ಲಿ ಒಂದು "ಸೇವಿಂಗ್ಸ್ ಬಾಕ್ಸ್" ಅಥವಾ "ಉಳಿತಾಯ ಡಬ್ಬದಲ್ಲಿ" ದಿನಕ್ಕೆ/ತಿಂಗಳಿಗೆ ಇಷ್ಟು ಎಂದು ಹಾಕುವುದು. ವರ್ಷಾಂತ್ಯಕ್ಕೆ ಸಂಗ್ರಹವಾದ ಹಣವನ್ನು ನಿಮ್ಮ ಕೈ ನಿಂದ ಸಂಘದ ಮೂಲಕ ವರ್ಷಕ್ಕೊಮ್ಮೆ ನಡೆಯುವ ಸಭೆಯಲ್ಲಿ ಅಂಗವಿಕಲರಿಗೆ,ಆರ್ಥಿಕ ಸಮಸ್ಸೆ ಇರುವ ವಿದ್ಯಾರ್ಥಿಗಳಿಗೆ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಅಥವಾ ಭಾರತೀಯ ಯೋಧರ ನಿಧಿಗೆ ಅಥವಾ ಪರಿಸರ ಕಾಳಜಿಗೆ ಅಥವಾ ಯಾವುದೇ ವ್ಯಕ್ತಿಗೆ ತಲುಪಿಸಬಹುದು.

3. ಪ್ರತಿಯೊಬ್ಬರಿಗೂ ಒಂದು ಅಭ್ಯಾಸ ಇರುತ್ತದೆ ಉದಾ- ಸಿಗರೇಟ್, ಬೀಡಿ, ಗುಟುಕ, ಪಾನ್ ಮಸಾಲಾ, ಆಲ್ಕೋಹಾಲ್ ಕುಡಿಯುವುದು, ಇತ್ಯಾದಿ. ಇಂತವರು ಸಮಾಜದ ಒಳಿತಿಗಾಗಿ ತಾವು ಮಾಡುವ ಅಭ್ಯಾಸದಲ್ಲಿ ಒಂದಿಷ್ಟನ್ನು ಸಾಮಾಜಿಕ ಕೆಲಸಗಳಿಗೆ ಉಳಿತಾಯ ಮಾಡುವುದು.
ಉದಾ-
•ದಿನಕ್ಕೆ 5 ಸಿಗರೇಟ್ ಸೇದುವವರು 4 ಸಿಗರೇಟ್ ಸೇದುವುದು ಮತ್ತು 1  ಸಿಗರೇಟ್ ನ ಹಣವನ್ನು ಉಳಿಸಿ "ಉಳಿತಾಯ ಡಬ್ಬದಲ್ಲಿ" ಹಾಕುವುದು.
•ದಿನಕ್ಕೆ 5 ಗುಟುಕಾ ಅಥವಾ ಪಾನ್ ಮಸಾಲಾ ಹಾಕುವವರು 4 ಗುಟುಕ/ಪಾನ್  ಮಸಾಲಾ ಹಾಕುವುದು ಮತ್ತು ೧ ಗುಟುಕದ ಹಣವನ್ನು "ಉಳಿತಾಯ ಡಬ್ಬದಲ್ಲಿ"  ಹಾಕುವುದು
•ಮಧ್ಯಪಾನ ಮಾಡುವವರು, ತಮ್ಮ ಅರೋಗ್ಯಕ್ಕೆ ಹಾನಿಯಾಗದಂತೆ ಸೇವಿಸಿ  ಸ್ವಲ್ಪ ಹಣವನ್ನು "ಉಳಿತಾಯ ಡಬ್ಬದಲ್ಲಿ" ಹಾಕುವುದು.
•ಇತ್ಯಾದಿ ....

4. ಸಾಮಾಜಿಕ ಕಳಕಳಿಯುಳ್ಳ ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿ ಇಂದ, ಪ್ರತೀ ದಿನ 1 ರೂಪಾಯಿಯನ್ನು "ಉಳಿತಾಯ ಡಬ್ಬಿಗೆ " ಹಾಕುವುದು. ಉದಾ - 1 ವರ್ಷಕ್ಕೆ 365 ರೂಪಾಯಿಗಳು ಸಂಗ್ರಹವಾಗುತ್ತದೆ ಹೀಗೆ ಒಂದು ಸಾವಿರ ವಿದ್ಯಾರ್ಥಿಗಳು ಸಂಗ್ರಹಿಸಿದರೆ ಒಂದು ವರ್ಷಕ್ಕೆ 1000X365 = 365000 ರೂಗಳು ಸಂಗ್ರಹವಾಗುತ್ತದೆ.

5. ಸಾಮಾಜಿಕ ಕಳಕಳಿಯುಳ್ಳ ಖಾಸಗಿ ಮತ್ತು ಸರ್ಕಾರೀ ನೌಕರರು ದಿನಕ್ಕೆ 5 ರೂಗಳಂತೆ "ಉಳಿತಾಯ ಡಬ್ಬಿಯಲ್ಲಿ " ಹಾಕಿದರೂ 1 ತಿಂಗಳಿಗೆ 150 ರೂಪಾಯಿಗಳು ಸಂಗ್ರಹವಾಗುತ್ತದೆ. ಅಂದರೆ ಒಂದು ವರ್ಷಕ್ಕೆ 150X12 = 1800 ರೂಪಾಯಿಗಳು ಸಂಗ್ರಹವಾಗುತ್ತದೆ. ಅಂದರೆ 1000 ನೌಕರರಿಂದ ಒಂದು ವರ್ಷಕ್ಕೆ ಸುಮಾರು 1000X1800 = 1800000 ರೂಗಳು ಸಂಗ್ರಹವಾಗುತ್ತವೆ.

6. ಸಾಮಾಜಿಕ ಕಾಳಜಿಯುಳ್ಳವರು ಬಿಸಿನೆಸ್ ಉದಾ - ಹೋಟೆಲ್, ಜವಳಿ, ಬೇಕರಿ, ಹಾರ್ಡ್ವೇರ್ ಶಾಪ್, ಪೈಂಟ್ ಶಾಪ್, ಇತ್ಯಾದಿ ಇವರು ತಮ್ಮ ಶಾಪ್ ಗಳಲ್ಲಿ "ಉಳಿತಾಯ ಡಬ್ಬಗಳನ್ನು" ಇಡುವುದರ ಮೂಲಕ ಆಸಕ್ತಿಯುಳ್ಳ ಗ್ರಾಹಕರಿಂದ "ಉಳಿತಾಯ ಡಬ್ಬದಲ್ಲಿ " ಹಣ ಸಂಗ್ರಹಿಸುವುದರಿಂದ ಕರ್ನಾಟಕಾದ್ಯಂತ ಒಂದು ವರ್ಷದಲ್ಲಿ ಕಡಿಮೆ ಎಂದರು ಸುಮಾರು 10 ಲಕ್ಷ ಸಂಗ್ರಾಹವಾಗುತ್ತದೆ. ಅಂಗಡಿಗಳಲ್ಲಿ ಚಿಲ್ಲರೆ ಇಲ್ಲ ಎಂಬ ನೆಪ ಒಡ್ಡಿ ಚಾಕೋಲೇಟ್ ಅಥವಾ ಪೆಪ್ಪರ್ಮೆಂಟ್ ಕೊಡುವವರ ಹತ್ತಿರ "ಖಡ್ಗ ಸಂಘದ" ಸಾಮಾಜಿಕ ಕಾಳಜಿಯ ಬಗ್ಗೆ ತಿಳಿಸಿ "ಉಳಿತಾಯ ಡಬ್ಬಿಯನ್ನು" ಉಪಯೋಗಿಸುವಂತೆ ಸಲಹೆ ಮಾಡಿ ಚಾಕೋಲೇಟ್ ಬದಲು ಚಿಲ್ಲರೆ ಹಣವನ್ನು ಡಬ್ಬದಲ್ಲಿ ಹಾಕುವಂತೆ ಕೇಳಿಕೊಳ್ಳುವುದು.

7. ಸಾಮಾಜಿಕ ಕಾಳಜಿಯುಳ್ಳವರು ದೂರ ಪ್ರಯಾಣಕ್ಕೆ ಕಾರ್ಗಳನ್ನು ( CAR POOLING) ಬಳಸುವ ಬದಲು ಬಸ್ಸುಗಳನ್ನು ಬಳಸಿ ತಮಗೆ ತೋಚಿದ ಹಣವನ್ನು "ಉಳಿತಾಯ ಡಬ್ಬಕ್ಕೆ" ಹಾಕುವುದು.
ಹೀಗೆ ಸಮಾನ ಮನಸ್ಕರು ಮತ್ತು ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳು ತಾವೇ ಉಳಿತಾಯ ಮಾಡಿ ಸಂಗ್ರಹಿಸಿದ ಹಣ ಕಡಿಮೆ ಎಂದರು ವರ್ಷಕ್ಕೆ 25 ರಿಂದ 30 ಲಕ್ಷ ಹಣ ಸಂಗ್ರಹವಾಗುತ್ತದೆ

ಮೇಲೆ ತಿಳಿಸಿರುವ ಯಾವುದೇ ಮೂಲದಿಂದ ಬಂದ ಹಣವನ್ನು ಖಡ್ಗ ಸಂಘ ವರ್ಷಕ್ಕೊಮ್ಮೆ ನಡೆಸುವ ಸಭೆಯಲ್ಲಿ ತಮಗೆ ಆಸಕ್ತಿಯುಳ್ಳ ವಿಭಾಗಕ್ಕೆ ನಿಮ್ಮ ಮೂಲಕವೇ ( ಸೈನಿಕ ನಿಧಿ/ಶಿಕ್ಷಣ/ಆರೋಗ್ಯ/ಕೃಷಿ/) ಸಹಾಯ ಮಾಡಬಹುದು.
ದಯವಿಟ್ಟು ಗಮನಿಸಿ ಇಲ್ಲಿ ಹೇಳಿರುವ ಹೇಳಿಕೆಗಳು ಸಂಘದ ಉದ್ದೇಶಗಳೇ ಹೊರತು, ಯಾರನ್ನು ಬಲವಂತವಾಗಿ ಮಾಡಿ ಎಂದು ಹೇಳುತ್ತಿಲ್ಲ ಆಸಕ್ತಿಯುಳ್ಳವರು ಮತ್ತು ನಿಷ್ಠಾವಂತರು ಮಾತ್ರ ನಮ್ಮೊಂದಿಗೆ ಕೈಜೋಡಿಸಬಹುದು

ಧನ್ಯವಾದಗಳು.
ನಿಮ್ಮ ನಿಷ್ಠಾವಂತ ಖಡ್ಗ ಸಂಘ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9972414251

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...