Friday, May 10, 2019

EXPENSES 2019-2020

SL No.
Date
Work
Received
Expense
Total
Donated By
1.
09-05-2019
Khadga Sangha Renewal
NA
3000
34781
Khadga Sangha
2.
10-05-2019
NA
1727
NA
36508
Mission ONE Rupee Team


Thursday, May 9, 2019

Mission One Rupee May 2019

*Mission One Rupee*
-------------------------------------
Month - May 2019
-------------------------------------
*_Payment Method_*
Google Pay -
*99004 37357*
Paytm
*99004 37357*
-------------------------------------
1. Raghu B R
Donated Rs 30 ✅
-------------------------------------
2.Kubendra swamy T
Donated 30 ✅
-------------------------------------
3. Prashanth S G
Donated Rs 100✅
-------------------------------------
4.Nataraj Tavarakere
Donated Rs 30✅
-------------------------------------
5. Sanju Muddenahalli
Donated Rs 30✅
-------------------------------------
6. Naveen Kumar H L
Donated Rs 30✅
-------------------------------------
7. Karigouda H
Donated Rs 30 ✅
-------------------------------------
8. Pradeepa ML
Donated Rs 30 ✅
-------------------------------------
9. Jagadeesh H R S
Donated Rs 30
-------------------------------------
10. Harish Naik L
Donated Rs 30 ✅
-------------------------------------
11. Hanumanth
Donated Rs. 30 ✅
--------------------------------------
12.Girish naik
Donated Rs.30 ✅
-------------------------------------
13. Yathish CK                                
Donated  Rs.30  ✅                                                                                                                                                                                                                 -------------------------------------
14. Punith Public TV                                
Donated  Rs.30  ✅ 
-------------------------------------
15. Nagaraj B R                                
Donated  Rs.30  ✅ 
-------------------------------------
16. Bhanuprakash T M                               
Donated  Rs.30  ✅ 

17. Mahantesh  B J
       365 ruppe
-------------------------------------
18. Manjunath Hatti
100 ✅
------------------------------------- 
19.Prashanth H M.           200 ✅                    
 _ _ _ _ _ _ _ _ _ _ _ _ _ _ _  
20.Sharan patil              101✅.     \
---------------------------------------                  
21.Virupakshi N J              30✅          
-------------------------------------             
 21.Mahanthesh phd              30✅                                  
-------------------------------------
22. Ranganath Ramagiri
30✅
-------------------------------------
23.Keerthi Raj N J 30✅
-------------------------------------
24 Lohith Ramagiri 101✅
-------------------------------------
25. Shivakumar Hodebeeranahalli 30
-------------------------------------
26. Syed Nayaz - 100
-------------------------------------
27. Shashi Kumar H U - 30
-------------------------------------
28. Basavaraj Machanayakanahalli 30
-------------------------------------


_*Total - Rs. 1727*_       

-------------------------------------                                                                                                                                                               please copy this text and update your details and share it here.
*PLEASE DONATE ON OR BEFORE 10th OF EVERY MONTH*

Monday, April 16, 2018

ಕೆರೆ ಉಳಿಸಿ - ನಾಡು ಬೆಳೆಸಿ - By Shivakumar Kodli

#ಕೆರೆ,

ಹೊಡೆಬೀರನಳ್ಳಿ ಚಿಂಚೋಳಿ ಕಲಬುರಗಿ - ಹೊಸ ಕೆರೆ.

ಸೂಳೇಕೆರೆ (ಶಾಂತಿಸಾಗರ) - ಹೂಳೆತ್ತುವ ಕೆಲಸ.

ಕೆರೆ ಹೂಳು ತೆಗೆಯಬೇಕು, ಅಂತರ್ಜಲ ಹೆಚ್ಚಿಸಬೇಕೆಂದು ‘ಬರ’ ಎಲ್ಲರನ್ನೂ ಎಚ್ಚರಿಸಿದೆ.
1700 ವರ್ಷಗಳ ಕೆರೆ ನೀರಾವರಿಯ ಭವ್ಯ ಇತಿಹಾಸ ಹೊಂದಿದ ನಾಡು ನಮ್ಮದು.
ರಾಜ ರಾಣಿಯರು, ದಂಡನಾಯಕರು, ಗ್ರಾಮಲೆಕ್ಕಿಗರು, ಕೃಷಿಕರು, ಸೂಳೆಯರು ಕೆರೆ ಕಟ್ಟಿಸಿದ ಉದಾಹರಣೆಗಳು ನಮ್ಮಲ್ಲಿವೆ. ಮಳೆ ನೀರನ್ನು ಭೂಮಿಗೆ ಇಂಗಿಸಲು, ಕೃಷಿ ನೀರಾವರಿಗೆ ಬಳಸಲು ರೂಪಿಸಿದ ಜಲಪಾತ್ರೆಗಳಿವು. ವಿಕೇಂದ್ರೀಕೃತ ನೀರಾವರಿಯ ಅತ್ಯುತ್ತಮ ವ್ಯವಸ್ಥೆಯಿದು. ನಿಶ್ಚಿತ ಜಲನಿಧಿಗಳಾಗಿ ಶತಮಾನಗಳಿಂದ ನೆರವಾದ ಜಲಮೂಲಗಳು ಸರಕಾರೀ ಕೆರೆಗಳಾಗಿ ಸಮುದಾಯದಿಂದ ದೂರಾಗಿವೆ. ಹಳ್ಳಿಗರೇ ನಿರ್ವಹಿಸುತ್ತಿದ್ದ ವ್ಯವಸ್ಥೆ ಇಂದು ನಿರ್ಲಕ್ಷ್ಯದಿಂದ ಹಾಳಾಗಿವೆ. ಬಡಾವಣೆ, ಬಸ್ ನಿಲ್ದಾಣ, ಉದ್ಯಾನಗಳಾಗಿ ಅತಿಕ್ರಮಣಕ್ಕೆ ಒಳಗಾಗಿವೆ. ತೀವ್ರ ಜಲಕ್ಷಾಮದಿಂದ ಈಗ ನಾವು ಪಾಠ ಕಲಿಯುತ್ತಿದ್ದೇವೆ. ಬೃಹತ್ ಅಣೆಕಟ್ಟು, ಆಳದ ಕೊಳವೆ ಬಾವಿ, ಎತ್ತರದ ಕಾಂಕ್ರೀಟ್ ಟ್ಯಾಂಕ್‍ಗಳು ನೀರು ನೀಡುವುದಿಲ್ಲವೆಂದು ಖಾತ್ರಿಯಾಗಿದೆ.

ರಾಜ್ಯದಲ್ಲಿ ಸರಾಸರಿ 500 ಮಿಲಿ ಮೀಟರ್ ಮಳೆ ಸುರಿದರೂ ಒಂದು ಚದರ್ ಮೀಟರ್ ಜಾಗದಲ್ಲಿ 500 ಲೀಟರ್ ನೀರು ಬೀಳುತ್ತದೆ. ಒಂದು ಎಕರೆಯಲ್ಲಿ 15-20 ಲಕ್ಷ ಲೀಟರ್ ಸುರಿಯುತ್ತದೆ. ಪ್ರವಾಹವಾಗಿ ಓಡುವ ಮಳೆ ನೀರನ್ನು ಕೆರೆ ಕಟ್ಟೆಗಳಲ್ಲಿ ಹಿಡಿಯುವ ಹಿರಿಯರ ಜಾಣ್ಮೆಯನ್ನು ನಾವು ಮರೆತಿದ್ದೇವೆ. ಭವಿಷ್ಯದಲ್ಲಿ ನಮ್ಮ ನೀರಿನ ಸಂಕಷ್ಟ ಇನ್ನೂ ಹೆಚ್ಚಲಿದೆ, ಅಳಿದುಳಿದ ಕೆರೆಗಳ ಸಂರಕ್ಷಣೆ, ಹೊಸ ಕೆರೆಗಳ ನಿರ್ಮಾಣದ ಮೂಲಕ ನೀರ ನೆಮ್ಮದಿ ಸಾಧಿಸುವ ಹೊಣೆ ನಮ್ಮ ಮೇಲಿದೆ. ಜಲಸಾಕ್ಷರತೆಯ ಮೂಲಕ ನಮ್ಮ ಹೆಜ್ಜೆ ಕೆರೆ ಸಂರಕ್ಷಣೆಯತ್ತ ಸಾಗಬೇಕಿದೆ.
ಕೆರೆಯ ಕೆಲಸ ಯಾರು ಮಾಡಬೇಕು?

‘ಒಂದು ಕ್ಷಣ ಸರಕಾರವನ್ನು ಮರೆಯೋಣ, ನಾವೇನು ಮಾಡಬಹುದೆಂದು ಚಿಂತಿಸಿ ಮುಂದುವರಿಯೋಣ’ ಗುಜರಾತಿನ ಹಿರಿಯ ಜಲಕಾರ್ಯಕರ್ತ ಶ್ಯಾಮ್ ಜಿ ಭಾಯ್ ಅಂಟಾಲಾ ಮಾತು ನಮಗೆ ಪ್ರೇರಣೆಯಾಗಿದೆ. ನಗರ ಹಾಗೂ ಹಳ್ಳಿಗಳ ಜಲಮೂಲ ಸಂರಕ್ಷಣೆಯನ್ನು ಜನಗಳೇ ಮುಂದಾಗಿ ಸಾಧ್ಯವಾದಷ್ಟು ಕಾರ್ಯ ಮಾಡಬೇಕೆಂಬ ಹಂಬಲ ನಮ್ಮದು ಸಂರಕ್ಷಣೆ ಪುಣ್ಯದ ಕೆಲಸ. ಧಾರ್ಮಿಕ ನಾಯಕರು, ದೇಗುಲಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ವ್ಯಾಪಾರಿಗಳು, ಆಟೋ ಚಾಲಕರು, ಕೃಷಿಕರು, ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳು, ಪತ್ರಕರ್ತರು, ಕಾರ್ಮಿಕರು ಹೀಗೆ ಸಮಾಜದ ಎಲ್ಲರೂ ಕಾರ್ಯಕ್ಕೆ ಕೈಜೋಡಿಸಬಹುದು.

ನೀರು ಎಲ್ಲರಿಗೂ ಬೇಕು, ನಮ್ಮ ಆರೋಗ್ಯ ನಮ್ಮ ಕೆರೆ ಹೇಗಿದೆಯೆಂಬುದನ್ನು ಅವಲಂಬಿಸಿದೆ. ಪ್ರತಿ ಮನೆಯವರೂ ಇದರಲ್ಲಿ ಭಾಗವಹಿಸಬೇಕು. ನಮ್ಮ ಕೈಲಾದ ಸಣ್ಣ ಸಣ್ಣ ಕೆಲಸ ಮಾಡುತ್ತ ಮುಂದುವರಿಯಬೇಕು.

ಈ ಕೆಳಗಿನ ಕಾರ್ಯಕ್ಕೆ ನೆರವಾಗಬಹುದು.

• ಕೆರೆ ಗುರುತಿಸಿ ಸುತ್ತಲಿನ ಸಮುದಾಯವನ್ನು ಸಂಘಟಿಸಿ ಹೂಳೆತ್ತುವ ಹೆಜ್ಜೆಯಿಡಬಹುದು,
• ಕೆರೆ ಪುನಶ್ಚೇತನ ಕಾರ್ಯಕ್ಕೆ ಆರ್ಥಿಕ ನೆರವು ನೀಡಬಹುದು
• ಕುಟುಂಬದ ಪ್ರತಿಯೊಬ್ಬರಿಗೆ ದಿನಕ್ಕೊಂದು ರೂಪಾಯಿಯಂತೆ ಜಲ ಕಾರ್ಯಕ್ಕೆ ನೀಡಿದರೂ ಹನಿ ಹನಿ ಕೂಡಿ ದೊಡ್ಡ ಕಾರ್ಯ ಮಾಡಬಹುದು
• ಜೆಸಿಬಿ/ಹಿಟ್ಯಾಚಿ/ಟಿಪ್ಪರ್/ಟ್ರ್ಯಾಕ್ಟರ್ ಹೂಳೆತ್ತಲು ಉಚಿತವಾಗಿ ಕಳಿಸಬಹುದು
• ಕೆರೆ ಕಾಯಕಕ್ಕೆ ಆರ್ಥಿಕ ನೆರವು ಸಂಗ್ರಹಿಸಲು ಮುಂದಾಗಬಹುದು
• ಕೆರೆ ಸುತ್ತಲಿನ ಪರಿಸರ ಸ್ವಚ್ಚತೆಯ ಶ್ರಮದಾನದಲ್ಲಿ ಭಾಗವಹಿಸಬಹುದು
• ಜಲ ಜಾಗೃತಿ ಪ್ರಕಟಣೆ/ ಪ್ರದರ್ಶನ ಫಲಕಕ್ಕೆ ಸಹಾಯ ನೀಡಬಹುದು
• ಕೆರೆ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ಕೆಲಸಗಾರರ/ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಬಹುದು. ಆಹಾರ, ತಂಪುಪಾನೀಯ ವ್ಯವಸ್ಥೆ ಮಾಡಬಹುದು.

ಜೀವ ಜಲ ಸಂರಕ್ಷಣೆಯಿಂದ ಎಲ್ಲರ ಬದುಕು ಹಸನಾಗುತ್ತದೆಂದು ನಂಬಿದ್ದೇವೆ. ಜನತೆ ಮನಸ್ಸು ಮಾಡಿದರೆ ಬಹುದೊಡ್ಡ ಪರಿವರ್ತನೆ ಮಾಡಬಹುದು. ನಾಡಿನ ನೀರಿನ ನೋವಿಗೆ ಸ್ಪಂದಿಸಲು ನಾವು ಮುಂದಾಗೋಣ. ಕೆರೆ ಕಾಯಕಕ್ಕೆ ಕೈಜೋಡಿಸೋಣ.ಒಂದು ಹೆಜ್ಜೆ ಜಲಸಾಕ್ಷರತೆಯ ಕಡೆಗೆ ಸಮುದಾಯವನ್ನು ಮುನ್ನೆಡೆಸೋಣ, ಜಲ ಜಾಗೃತ ಪಡೆ ಕಟ್ಟೋಣ, ಮನುಕುಲ-ಜೀವ ಸಂಕುಲ ಉಳಿಸೋಣ.

ಮಳೆ ಸುರಿಯದ ನೆಲೆಯಲ್ಲಿ ಕೆರೆಯಿಂದ ಪ್ರಯೋಜನವೇನು?
ಹವಾಮಾನ ಬದಲಾಗಿದೆ, ಮಳೆಗಾಲದಲ್ಲಿ ಮಳೆ ಸುರಿಯದಿದ್ದರೂ ಬೇಸಿಗೆಯಲ್ಲಿ ಅಕಾಲಿಕ ಮಳೆ ಜೋರಾಗಿ ಸುರಿಯುತ್ತಿದೆ.
ಒಮ್ಮೆಗೆ ಕೆರೆ ತುಂಬಿದರೆ ಐದಾರು ತಿಂಗಳು ಕೃಷಿ ಬದುಕು ಸಾಗುವುದನ್ನು ಬಯಲುನಾಡಿನಲ್ಲಿ ನೋಡುತ್ತೇವೆ. ಅದರಲ್ಲಿಯೂ ಎರೆ ಮಣ್ಣಿನ ಹೊಲಗಳಿಗೆ 400 ಮಿಲಿ ಮೀಟರ್ ಮಳೆ ಸುರಿದರೂ ಸುಗ್ಗಿ ಸಂಭ್ರಮ ಹೆಚ್ಚಿಸುವ ತಾಕತ್ತು ಪಡೆದಿವೆ. ಹೊಲ, ಗುಡ್ಡ, ರಸ್ತೆ ಹೀಗೆ ಎಲ್ಲೆಡೆಗಳಿಂದ ಹರಿಯುವ ನೀರನ್ನು ಊರಿನ ಕೆರೆಗಳಲ್ಲಿ ತುಂಬುವುದು ಪ್ರಮುಖ ಕಾರ್ಯವಾಗಿದೆ.
ಹೀಗಾಗಿ ಕೆರೆ ಸಂರಕ್ಷಣೆಗೆ ನಾವು ಸದಾ ಜಾಗೃತರಾಗಿರಬೇಕು. ಈಗಾಗಲೇ ಕೆರೆ ನಿರ್ಮಿಸಿದ ರಾಯಚೂರಿನ ಮಾನ್ವಿ ತಾಲೂಕಿನ ಸಿಂಗಡದಿನ್ನಿ, ಬಸಾಪುರಗಳಲ್ಲಿ ಕೇವಲ 300 ಮಿಲಿ ಮೀಟರ್ ಮಳೆ ಸುರಿದಾಗ ಕೆರೆಯಲ್ಲಿ ನೀರು ಸಂಗ್ರಹಿಸಿದವರು ‘ನಮ್ಮೂರಿಗೆ ಬರವಿಲ್ಲ’ ಎಂದು ಕಳೆದ ವರ್ಷದ ಬರಗಾಲದಲ್ಲಿ ಹೇಳಿದ್ದಾರೆ. ನಾವು ನಮ್ಮ ಕೃಷಿ, ಅರಣ್ಯ ಭೂಮಿಯಲ್ಲಿ ಬಿದ್ದ ನೀರನ್ನು ಸಂಗ್ರಹಿಸಲು ಕೆರೆ ನಿರ್ಮಿಸುವ ತುರ್ತು ಅಗತ್ಯವಿದೆ.
ಹೂಳು ತೆಗೆಯುವ ಮುಂಚೆ ಕೆರೆಯ ದಂಡೆ ಗಮನಿಸಿರಿ
ಕೆರೆ ದಂಡೆಗಳು ಅರ್ಧವೃತ್ತಾಕಾರವಾಗಿರುತ್ತವೆ. ಕೆರೆಯಲ್ಲಿ ನೀರು ತುಂಬಿದ ಬಳಿಕ ಕೋಡಿಗಳ ಮೂಲಕ ಸರಾಗವಾಗಿ ನೀರು ಹೊರಕ್ಕೆ ಹರಿಯಬೇಕು. ಒಂದು ಕೆರೆ ತುಂಬಿದ ಬಳಿಕ ಕೆಳಗಡೆಯ ಇನ್ನೊಂದು ಕೆರೆಗೆ ಹರಿಯುವಂತೆ ಕಾಲುವೆಗಳನ್ನು ಮೈಸೂರು ಸೀಮೆಯಲ್ಲಿ ನೋಡಬಹುದು. ಒಂದು ಕೆರೆಯ ಹೂಳು ತೆಗೆಯುವ ಮುನ್ನ ಕೆರೆದಂಡೆಗಳು ಸುರಕ್ಷಿತವಾಗಿದೆಯೇ ಪರಿಶೀಲಿಸುವುದು ಮುಖ್ಯ ಕೆಲಸ. ನೀರು ಹೊರಹೋಗುವ ತೂಬಿನ ಸ್ಥಿತಿ ಗಮನಿಸಿ ಸರಿಪಡಿಸುವ ಅಗತ್ಯವಿದೆ. ಕೆರೆ ದಂಡೆ ರಸ್ತೆ ನಿರ್ಮಾಣದಿಂದ ಶಿಥಿಲವಾಗಿರಬಹುದು, ಮರಗಳ ಬೇರುಗಳಿಂದ ಬಿರುಕು ಮೂಡಿರಬಹುದು, ದಂಡೆಯಲ್ಲಿದ್ದ ಮರಗಳು ಸತ್ತ ಬಳಿಕ ಬೇರಿನ ಜಾಗದ ಭೂಮಿ ಪೊಳ್ಳಾಗಿರಬಹುದು. ದನಕರುಗಳ ಓಡಾಟ, ಮಳೆ ರಭಸದಿಂದ ಕುಸಿದಿರಬಹುದು. ಇವನ್ನು ಗಟ್ಟಿಮಣ್ಣಿನಿಂದ ಸರಿಪಡಿಸುವುದು ಮುಖ್ಯ. ಕೆರೆಯಲ್ಲಿ ನೀರು ತುಂಬಿದಾಗ ದಂಡೆಯಲ್ಲಿ ದೋಷವಿದ್ದರೆ ನೀರು ನಿಲ್ಲಿಸಲು ಸಾಧ್ಯವಿಲ್ಲ. ಒಂದು ಸುತ್ತು ದಂಡೆಯ ಮೇಲ್ಭಾಗ, ಒಳಪಾಶ್ರ್ವ ಹಾಗೂ ಹೊರಮೈ ಗಮನಿಸಿದರೆ ಪರಿಸ್ಥಿತಿ ಅರಿಯಬಹುದು.

ಗಿಡಗಳ ಅತಿಕ್ರಮಣ ಜಾಲಿಯ ಕಂಟಿಗಳು ಕೆರೆ ಪಾತ್ರಗಳನ್ನು ಆವರಿಸಿದ್ದನ್ನು ಎಲ್ಲೆಡೆ ನೋಡುತ್ತೇವೆ. ಇವುಗಳನ್ನು ಬೇರು ಸಹಿತ ಕಿತ್ತು ನಾಶಪಡಿಸಿದರೆ ಮಾತ್ರ ಕೆರೆಯಲ್ಲಿ ನೀರು ಹೇಗೆ ನಿಲ್ಲಿಸಬಹುದೆಂದು ತಿಳಿಯುತ್ತದೆ. ನೀರಿನಲ್ಲಿ ತೇಲುವ ‘ಅಂತರಗಂಗೆ’ ಸೇರಿದಂತೆ ಇನ್ನೂ ಕೆಲವು ಕಳೆ ಗಿಡಗಳು ನೀರನ್ನೂ ಹಾಳು ಮಾಡುತ್ತವೆ. ಆಪು(ಬಾದೆ)ಹುಲ್ಲು ನೀರಿರುವ ನೆಲೆ ಆಕ್ರಮಿಸುತ್ತದೆ. ಕಳೆ ಗಿಡಗಳ ನಿಯಂತ್ರಣಕ್ಕೆ ಆಗಾಗ ಗಮನಹರಿಸಬೇಕು. ಕೆರೆಯ ಕಳೆಯ ನಿಯಂತ್ರಣಕ್ಕೆ ಸರಕಾರಕ್ಕೆ ಮೊರೆ ಹೋಗುವ ಬದಲು ಸಮುದಾಯ ನೇತೃತ್ವದಲ್ಲಿ ಕಾರ್ಯನಿರ್ವಹಿಸಬಹುದು.

ದಂಡೆಯಲ್ಲಿ ಯಾವ ಮರ ಬೆಳೆಸುತ್ತೀರಿ?
ಕೆರೆ ನಿರ್ಮಿಸಿದ ಬಳಿಕ ಕೆರೆ ದಂಡೆಯ ಸುತ್ತ ಓಡಾಟಕ್ಕೆ ಮಾರ್ಗ ರೂಪಿಸುವುದು ಎಲ್ಲರಿಗೂ ಖುಷಿಯ ಕೆಲಸ. ಕೆರೆಯ ಸುತ್ತ ಉದ್ಯಾನ ರೂಪಿಸುವ ಉತ್ಸಾಹ ಸಹಜವಾಗಿದೆ. ನಗರವನ್ನು ಸುಂದರವಾಗಿಸಲು ಹೂಳು ತೆಗೆಯುವ ಯೋಜನೆಯಲ್ಲಿಯೇ ಇದಕ್ಕೆ ಹಣ ನಿಗದಿಪಡಿಸಿರುತ್ತಾರೆ. ಕೆರೆ ಎಷ್ಟು ಗಾತ್ರವಿದೆ? ದಂಡೆ ಎಷ್ಟು ಅಗಲವಿದೆ? ಕೆರೆ ಎಲ್ಲಿದೆ? ಎಂಬುದರ ಆಧಾರದಲ್ಲಿ ದಂಡೆಯ ಮರಗಳ ಆಯ್ಕೆ ನಡೆಯಬೇಕು. ದಂಡೆಯ ಮಣ್ಣು ಕುಸಿಯದಂತೆ ಲಾವಂಚದ ಹುಲ್ಲು ಹಾಕಬಹುದು. ದನಕರುಗಳಿಗೂ ಉತ್ತಮ ಮೇವಾಯಿತೆಂದು ನಾಟಿ ಮಾಡಬಹುದು. ಹೀಗಾಗಿ ಹೊಸ ಕೆರೆಯ ದಂಡೆಗೆ ಯಾವುದನ್ನು ನಾಟಿ ಮಾಡಬೇಕೆಂದು ಎಚ್ಚರಿಕೆಯಿಂದ ನಿರ್ಧರಿಸಬೇಕು. ದಂಡೆಯ ನೆರಳಿಗೆ ಅನುಕೂಲವೆಂದು ಮಾವು, ಹಲಸು, ಸುಬಾಬುಲ್, ಆಲ, ಮೇಪ್ಲವರ್ ಸಸ್ಯ ನಾಟಿ ಮಾಡಲಾಗುತ್ತದೆ. ಫಲವತ್ತಾದ ಮಣ್ಣಿನಲ್ಲಿ ಬಹುಬೇಗ ಮರಗಳು ಬೆಳೆಯುತ್ತವೆ. ಆದರೆ ದಂಡೆಯ ಆಳಕ್ಕೆ ಬೇರು ಇಳಿಸುವುದರಿಂದ ಮಣ್ಣು ಸಡಿಲವಾಗುತ್ತವೆ.

ವಿವಿಧ ಜಾತಿಯ ಬಿದಿರನ್ನು ಬೆಳೆಸುವುದರಿಂದ ಮಣ್ಣಿನ ಸಂರಕ್ಷಣೆಯಾಗುತ್ತದೆ. ಬಗಿನೆ ಬೇರುಗಳು ಕೆರೆದಂಡೆಗೆ ಹಾನಿ ನೀಡುವುದಿಲ್ಲ, ನೆರಳಿಗಾಗಿ ಇಂಥ ಮರಗಳನ್ನು ಬೆಳೆಸಬಹುದು. ಮುರುಗಲು(ಕೋಕಂ), ಚೆರ್ರಿ, ಸೀತಾ ಅಶೋಕ, ದೇವಕಣಗಿಲೆ ಬೆಳೆಸಬಹುದು. ದಂಡೆಯಲ್ಲಿ ಮರ ಬೆಳೆಸುವ ವಿಚಾರದಲ್ಲಿ ಸ್ಥಳೀಯ ಹಿರಿಯರ/ ಅನುಭವಿಗಳ ಸಲಹೆ ಪಡೆಯುವುದು ಸೂಕ್ತವಿದೆ.
ಕೆರೆಯ ಫಲಾನುಭವಿಗಳು ಯಾರು?
ಕೃಷಿಕರಿಗೆ ಕೆರೆಯ ನೀರು ಬಳಕೆಯಾಗುತ್ತಿದ್ದರೆ ಎಷ್ಟು ಕ್ಷೇತ್ರಕ್ಕೆ ಯಾವ ಬೆಳೆಗೆ ಉಪಯೋಗವಾಗುತ್ತದೆಂದು ತಿಳಿಯಬೇಕು. ಕೆರೆಯ ನೀರನ್ನು ಯಾವ ಕಾಲದಲ್ಲಿ ನೀರಾವರಿಗೆ ಬಳಸಲಾಗುತ್ತದೆಂದು ಮಾಹಿತಿ ಸಂಗ್ರಹಿಸಬೇಕು. ಬೇಸಿಗೆಯಲ್ಲಿ ತೂಬಿನ ಮೂಲಕ ನೀರು ಹೋಗುವುದನ್ನು ತಡೆದರೆ ಸುತ್ತಲಿನ ಬಾವಿಗಳಲ್ಲಿ ಅಂತರ್ಜಲ ಉಳಿಯುತ್ತದೆ.

ವಿವೇಚನೆಯಿಲ್ಲದೇ ಮಳೆ ಕೊರತೆಯ ದಿನಗಳಲ್ಲಿ ನೀರನ್ನು ಕಾಲುವೆ ಮೂಲಕ ಹರಿಸುವುದರಿಂದ ಜನ ಜಾನುವಾರುಗಳು ಜಲಕ್ಷಾಮದಿಂದ ಬಳಲುವುದನ್ನು ತಪ್ಪಿಸಬಹುದು. ಮನುಷ್ಯರ ಕುಡಿಯುವ ನೀರಿನ ಬಳಕೆಗಾಗಿ ಕೆರೆಯ ಜಾಗದಲ್ಲಿ ಪ್ರತ್ಯೇಕವಾಗಿ ಗೂಟಗಳನ್ನು ನಿಲ್ಲಿಸುವ ವ್ಯವಸ್ಥೆ ಶಿವಮೊಗ್ಗದ ಸೊರಬ ಪ್ರದೇಶದಲ್ಲಿದೆ. ಇಡೀ ಕೆರೆಗೆ ದನಕರುಗಳು ಇಳಿದು ರಾಡಿ ಮಾಡುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆಂದು ಈ ವಿಧಾನ ಚಾಲ್ತಿಯಲ್ಲಿತ್ತು. ಒಂದು ಕೆರೆಯ ನೀರಿನ ಬಳಕೆ ವಿಚಾರದಲ್ಲಿ ಹೂಳೆತ್ತುವ ಮುನ್ನ ಅರಿಯಬೇಕು. ಕೆರೆಯ ಹೂಳೆತ್ತಿದ ವರ್ಷದಲ್ಲಿ ಭೂಮಿಗೆ ನೀರಿಂಗುವ ಅವಕಾಶ ಜಾಸ್ತಿಯಾಗಿ ಕೆಲವೊಮ್ಮೆ ತೂಬಿನಿಂದ ಮಳೆಗಾಲದಲ್ಲಿಯೂ ನೀರು ಹೊರ ಹರಿಯುವುದಿಲ್ಲ. ಕೆರೆ ಹೂಳೆತ್ತಿದ್ದರಿಂದ ನೀರು ಹೊರ ಬರುತ್ತಿಲ್ಲವೆಂದು ಜನ ಆಗ ಟೀಕಿಸುತ್ತಾರೆ. ಒಂದೆರಡು ವರ್ಷ ಈ ಸಮಸ್ಯೆ ಉದ್ಬವಿಸಬಹುದು. ಜನತೆಗೆ ಪರಿಸ್ಥಿತಿ ಮನದಟ್ಟು ಮಾಡಲು ನೀರು ಬಳಕೆಯ ಚರ್ಚೆ ಮಾಡುವುದು ಸೂಕ್ತ. ಹೇರೆತ್ತು, ಕೋಣ, ಮನುಷ್ಯರ ಪ್ರಯತ್ನದಿಂದ ಕೆರೆ ನಿರ್ಮಿಸುವ ಕಾಲ ಈಗ ಬದಲಾಗಿದೆ. ಜೆಸಿಬಿ, ಹಿಟ್ಯಾಚಿಗಳು ಮಣ್ಣು ಅಗೆಯಲು ಬಂದಿವೆ.

ದೊಡ್ಡ ಕೆರೆಗಳ ಹೂಳು ತೆಗೆಯುವಾಗ ಹೆಚ್ಚು ಸಾಮಥ್ರ್ಯದ ಯಂತ್ರಗಳು ಅನುಕೂಲವಾಗುತ್ತವೆ. ಕೆರೆಯ ಹೂಳು ತೆಗೆದು ಮಳೆ ನೀರು ಶೇಖರಿಸುವುದು ನಮ್ಮ ಮುಖ್ಯ ಉದ್ದೇಶವಾದ್ದರಿಂದ ಯಂತ್ರ ಬಳಸಿದರೆ ಬೇಗ ಕೆಲಸ ಮುಗಿಸಬಹುದು. ಮನುಷ್ಯರನ್ನು ಬಳಸಿದರೆ ಬಡವರಿಗೆ ಕೆಲಸ ಸಿಗುತ್ತದೆ, ಕೆರೆ ನಿರ್ಮಾಣದ ಅನುಭವವೂ ಆಗುತ್ತದೆಂದು ಕೆಲವರು ಹೇಳಬಹುದು. ಆದರೆ ಈಗ ನಮ್ಮ ಕೆಲಸದ ಸಾಮಥ್ರ್ಯ ಕಡಿಮೆಯಾಗಿದೆ. ಅದರಲ್ಲಿಯೂ ಉರಿ ಬಿಸಿಲಿನ ಎಪ್ರಿಲ್-ಮೇ ತಿಂಗಳಿನಲ್ಲಿ ದುಡಿಯುವುದಕ್ಕೆ ಶ್ರಮದ ಅನುಭವ ಬೇಕು.

ಒಂದು ತಾಸು ಜೆಸಿಬಿ 1000-1200 ರೂಪಾಯಿ ಖರ್ಚಾಗುತ್ತದೆ. ಅದು ಗಂಟೆಗೆ 28-30 ಕ್ಯುಬಿಕ್ ಮೀಟರ್ ಮಣ್ಣು ಅಗೆಯುತ್ತದೆ. ಒಂದು ಟ್ರ್ಯಾಕ್ಟರ್‍ನಲ್ಲಿ ಒಣ ಮಣ್ಣಾದರೆ 2.5 ಕ್ಯುಬಿಕ್ ಮೀಟರ್ ಸಾಗಿಸಬಹುದು. ಟಿಪ್ಪರ್‍ಗಳಲ್ಲಿ 3 ಕ್ಯುಬಿಕ್ ಮೀಟರ್ ಒಯ್ಯಬಹುದು. ದೊಡ್ಡ ಕೆರೆ ಹೂಳೆತ್ತಲು ಹಿಟ್ಯಾಚಿ, ಟಿಪ್ಪರ್‍ಗಳು ಸೂಕ್ತ. ಒಂದು ಕೆಲಸ ಆರಂಭಿಸಿ ಬೇಗ ಮುಗಿಸಿದರೆ ಹಣ, ಸಮಯದ ಉಳಿತಾಯವಾಗುತ್ತದೆ. ಕೆಲವೊಮ್ಮೆ ಬೇಸಿಗೆ ಮಳೆ ಸುರಿದರೆ ಹೂಳೆತ್ತಲಾಗದೇ ಕೆಲಸ ಕೈಬಿಡುವ ಪರಿಸ್ಥಿತಿ ಬರುತ್ತದೆ. ಈಗ ಕಾಲ ಬದಲಾಗಿದೆ. ಸಂಚಾರಕ್ಕೆ ಎತ್ತಿನಗಾಡಿ, ಕಾಲ್ನಡಿಗೆ ಮರೆತು ಬಸ್ಸು, ಕಾರುಗಳಲ್ಲಿ ನಾವು ಸಂಚರಿಸುತ್ತೇವೆ. ಹೇಗೆ ಸಂಚಾರ ಅನುಕೂಲತೆಗೆ ಯಂತ್ರ ಬಳಸುತ್ತೇವೆಯೋ ಹಾಗೇ ಜಲಸಂರಕ್ಷಣೆಯ ಪುಣ್ಯದ ಕೆಲಸ ತುರ್ತಾಗಿ ಮುಗಿಸಲು ಯಂತ್ರಗಳು ಸೂಕ್ತ.

ಮಣ್ಣು ಸಾಗಣೆ ಹತ್ತಿರವಿದ್ದಷ್ಟೂ ಅನುಕೂಲ
ಒಂದು ಕ್ಯುಬಿಕ್ ಮೀಟರ್ ಮಣ್ಣು ಅಗೆದು ಕಿಲೋ ಮೀಟರ್ ಸನಿಹದಲ್ಲಿ ಹಾಕಲು 60-80 ರೂಪಾಯಿ ಖರ್ಚಾಗುತ್ತದೆಂದು ಸರಕಾರಿ ದಾಖಲೆ ಹೇಳುತ್ತದೆ.
ಆದರೆ ಯಾವಾಗಲೂ ಕೆರೆಯ ಕೆಲಸ ಮೇ 15 ರೊಳಗೆ ಮುಗಿಯಬೇಕು. ಮಳೆ ಸುರಿದರೆ ಕೆಲಸ ಅಸ್ತವ್ಯಸ್ಥವಾಗುತ್ತದೆ, ಮುಂದಿನ ವರ್ಷ ಕೆರೆ ಒಣಗುವುದನ್ನು ಕಾಯುತ್ತ ಕೂಡ್ರಬೇಕಾಗುತ್ತದೆ. ಕೆರೆ ಹೂಳೆತ್ತುವುದು ನಮ್ಮ ಮುಖ್ಯ ಕೆಲಸವೇ ಹೊರತೂ ರೈತರ ಹೊಲಕ್ಕೆ ಮಣ್ಣು ನೀಡುವುದಲ್ಲ.

ಕೆರೆಯ ಗಾತ್ರ, ಹೂಳಿನ ಪ್ರಮಾಣ ಅರಿಯಿರಿ
ಕೆರೆಯಲ್ಲಿರುವ ಹೂಳಿನ ಪ್ರಮಾಣ ತಿಳಿಯುವುದು ಹೇಗೆ? ಪ್ರಶ್ನೆ ಹಲವರದು. ಕೆರೆಯಂಗಳದಲ್ಲಿ ಒಂದು ಜಾಗದಲ್ಲಿ ಜೆಸಿಬಿ ಸಹಾಯದಿಂದ ಹತ್ತಡಿ ಅಗೆದರೆ ಅಲ್ಲಿನ ಮಣ್ಣಿನ ಸ್ವರೂಪ ಗಮನಿಸಿ ಹೂಳು ಎಷ್ಟಿದೆಯೆಂದು ತಿಳಿಯಬಹುದು. ಇಲ್ಲವೇ ಬಿದಿರು ಕೋಲನ್ನು ಕೆರೆಯ ಕೆಸರಿನಲ್ಲಿ ಹುಗಿದರೂ ಹೂಳಿನ ಅಂದಾಜು ದೊರೆಯುತ್ತದೆ. ಒಂದು ಕ್ಯುಬಿಕ್ ಮೀಟರ್ ಮಣ್ಣು ತೆಗೆದ ಗುಂಡಿಯಲ್ಲಿ ಒಂದು ಸಾವಿರ ಲೀಟರ್ ನೀರು ಶೇಖರಿಸಬಹುದು. ಕೆರೆಯ ಪಾತ್ರದ ಎಷ್ಟು ಹೂಳು ತೆಗೆಯುತ್ತೀರಿ ಎಂಬ ಲೆಕ್ಕದಲ್ಲಿ ಕೆರೆಯ ನೀರು ಸಂಗ್ರಹಣಾ ಪ್ರಮಾಣ ಅರಿಯಬಹುದು. ಕೆರೆಯ ದಂಡೆ ಗಟ್ಟಿಯಾಗಿದ್ದಲ್ಲಿ ಎರಡು ಮೂರು ಅಡಿಯಷ್ಟು ನೀರನ್ನು ದಂಡೆಯೆತ್ತರ ಏರಿಸಬಹುದು.

ಕೆರೆ ಹೂಳು ತೆಗೆಯೋದು ಮುಖ್ಯ
ಕೆರೆ ಹೂಳು ತೆಗೆಯುವ ಸರಕಾರಿ ಯೋಜನೆಗಳಲ್ಲಿ ಹೂಳು ತೆಗೆಯುವುದಕ್ಕೆ ಕಡಿಮೆ ಹಣವಿರುತ್ತದೆ. ದಂಡೆಯ ಸುತ್ತ ಕಲ್ಲು ಕಟ್ಟುವುದು, ಪೈಪ್ ಅಳವಡಿಸುವುದು, ಕಾಂಕ್ರೀಟ್ ಕಾರ್ಯಗಳಿಗೆ ಹೆಚ್ಚು ಹಣ ವಿನಿಯೋಗವಾಗುತ್ತದೆ. ಕೆರೆ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನುಸರಿಸುವುದಾಗಿ ಇಂಜಿನಿಯರ್‍ಗಳು ಹೇಳುತ್ತಾರೆ. ಕೆರೆಯ ಪಾತ್ರವನ್ನು ಆಳ ಮಾಡಿದರೆ ಹೆಚ್ಚು ನೀರು ಸಂಗ್ರಹಿಸಬಹುದು. ದಂಡೆಗೆ ಪಿಚ್ಚಿಂಗ್ ಕಟ್ಟುವುದು ಈಗ ಮುಖ್ಯವಾಗಿ ನೀರು ನಿಲ್ಲಿಸುವ ಪ್ರಮಾಣ ಕಡಿಮೆಯಾಗಿದೆ. ಕೆರೆಯ ಅಲಂಕಾರವೇ ಹೆಚ್ಚಾಗಿ ಮೂಲ ಉದ್ದೇಶ ಮರೆಯಬಾರದು.

ಕೆರೆಯ ಆಳ ಜಾಸ್ತಿ ಮಾಡಬಹುದು
ಕೆರೆಯಲ್ಲಿ ನೀರು ವಿಶಾಲ ಪ್ರದೇಶದಲ್ಲಿ ನಿಂತಾಗ ಆವಿಯಾಗುವ ಪ್ರಮಾಣ ಜಾಸ್ತಿ. ಶತಮಾನಗಳ ಹಿಂದೆ ಕೆರೆ ಆಯ್ಕೆಗೆ ಜಾಗ ಗುರುತಿಸುವಾಗ ಭೂ ತಗ್ಗಿನ ನೈಸರ್ಗಿಕ ಅನುಕೂಲತೆ ಗಮನಿಸಿ ಕಣಿವೆಯಲ್ಲಿ ಕೆರೆ ನಿರ್ಮಿಸಿದ್ದರು. ನೀರು ಹೆಚ್ಚು ಸಂಗ್ರಹಿಸಲು ವಿಶಾಲ ಜಾಗದಲ್ಲಿ ದಂಡೆ ನಿರ್ಮಿಸಿದ್ದಾರೆ. ದನಕರು, ಜನತೆ ಕೆರೆಯಂಗಳಕ್ಕೆ ಇಳಿದರೆ ಅಪಾಯವಾಗಬಹುದೆಂದು ಆಳ ಕಡಿಮೆ ಮಾಡಿದ್ದಾರೆ. ಕೆರೆಯ ಮಧ್ಯ ಭಾಗದಲ್ಲಿ ಎರಡು ಮೂರು ಎಕರೆ 10-12 ಅಡಿ ಆಳ ಮಾಡಬಹುದು, ಇದು ಒಂದರ್ಥದಲ್ಲಿ ಡೆಡ್ ಸ್ಟೋರೇಜ್ ಜಾಗ, ಇಲ್ಲಿ ಜಲಚರಗಳು ಸಂರಕ್ಷಿತವಾಗುತ್ತವೆ. ಆಳದ ಪಾತ್ರದ ಮೈ ಇಳಿಜಾರಾಗಿರುವಂತೆ ರೂಪಿಸಿದರೆ ದನಕರುಗಳು ನೀರು ಕುಡಿದು ಸುರಕ್ಷಿತವಾಗಿ ಮೇಲೆರುತ್ತವೆ. ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹಿಸುವ ಅವಕಾಶ ದೊರೆಯುತ್ತದೆ. ಒಮ್ಮೆ ಕೆರೆ ದಂಡೆ ಒಡೆದರೂ ಒಂದಿಷ್ಟು ನೀರು ಉಳಿದು ಅಂತರ್ಜಲಕ್ಕೆ ಅನುಕೂಲವಾಗುತ್ತದೆ.

ದ್ವೀಪ ರೂಪಿಸಬಹುದು ಕೆರೆಯ ನಡುವೆ ಒಂದು ಪುಟ್ಟ ದ್ವೀಪ ನಿರ್ಮಿಸಿ ಕೆಲವು ಮರಗಿಡ ಬೆಳೆಸಬಹುದು. ಪಕ್ಷಿಗಳಿಗೆ ಆವಾಸವಾಗಿ ಇವು ನೆರವಾಗುತ್ತವೆ. ಕೆರೆಯ ಸೌಂದರ್ಯವೂ ಹೆಚ್ಚುತ್ತದೆ.
ನೀರು ಒಳ ಬರುವ ಕಾಲುವೆ ಸರಿಪಡಿಸಿರಿ
ಕೆರೆಯಂಗಳಕ್ಕೆ ಮಳೆ ನೀರು ಒಳಬರುವ ಕಾಲುವೆಗಳು ಸರಿಯಿದ್ದರೆ ಮಾತ್ರ ಮಳೆ ನೀರು ಕೆರೆಗೆ ಬರುತ್ತದೆ. ಹೀಗಾಗಿ ಕೆರೆಯ ಹಿಂಭಾಗದ ಕಾಡು, ಹೊಲ, ತೋಟಗಳನ್ನು ಸುತ್ತಾಡಿ ನೀರು ಹರಿಯುವ ಸ್ವರೂಪ ಗಮನಿಸಬೇಕು. ಮಳೆ ಬಂದಾಗ ಅಲ್ಲಿನ ಪರಿಸರ ನೋಡಿದವರು ಇದನ್ನು ಸ್ಪಷ್ಟವಾಗಿ ಹೇಳಬಹುದು. ಕಾಲುವೆಯಲ್ಲಿನ ಮರ ಗಿಡ ತೆಗೆದು ಸರಾಗ ಹರಿದು ಬರಲು ವ್ಯವಸ್ಥೆ ಮಾಡಬೇಕು. ಮಳೆ ನೀರಿನ ಜೊತೆ ಅಪಾರ ಪ್ರಮಾಣದ ಹೂಳು ಬರುತ್ತದೆ. ಕಾಲುವೆಯಿಂದ ಕೆರೆಗೆ ನೀರು ಒಳಬರುವ ಜಾಗದಲ್ಲಿ ಹೂಳು ತಡೆಗುಂಡಿ ರೂಪಿಸಿದರೆ ಹೂಳಿನ ಸಮಸ್ಯೆ ಪರಿಹರಿಸಿ ಭವಿಷ್ಯದಲ್ಲಿ ಕೆರೆ ಚೆನ್ನಾಗಿರುವಂತೆ ರಕ್ಷಿಸಬಹುದು.

ಮಳೆ ಬಂದಾಗ ಕೆರೆಗೆ ಹೋಗಿರಿ ಹೊಸ ಕೆರೆ ಆಥವಾ ಹಳೆಯ ಕೆರೆಯ ಹೂಳು ತೆಗೆದ ಬಳಿಕ ಮಳೆಗಾಲ ಆರಂಭವಾದಾಗ ಆಗಾಗ ಕೆರೆಯತ್ತ ಹೋಗಬೇಕು. ಕೆಲವೊಮ್ಮೆ ಮಳೆ ನೀರು ಕೆರೆಗೆ ಬರದೇ ಅಕ್ಕಪಕ್ಕ ಹರಿದು ಹೋಗುತ್ತಿದ್ದರೆ ಗಮನಿಸಿ ಕೆರೆಯತ್ತ ತಿರುಗಿಸಬಹುದು. ಹೊಸ ಮಣ್ಣು ಹಾಕಿ ದಂಡೆ ರೂಪಿಸಿದಾಗ ಮಳೆಯಲ್ಲಿ ಕುಸಿಯಬಹುದು. ಅದು ಕುಸಿಯದಂತೆ ಹುಲ್ಲು ನಾಟಿ ಮಾಡುವುದು, ಪ್ಲಾಸ್ಟಿಕ್ ಶೀಟು ಹೊದೆಸುವ ಕಾರ್ಯವನ್ನು ತುರ್ತಾಗಿ ಮಾಡುವುದರಿಂದ ನಾಶ ತಡೆಯಬಹುದು.
ಟೀಕೆಯ ಮಾತುಗಳಿಗೆ ಮಾದರಿಯ ಮೂಲಕ ಉತ್ತರಿಸಿರಿ ಕೆರೆಗಳನ್ನು ಹೂಳು ತುಂಬಲು ಬಿಟ್ಟು ಆರೋಗ್ಯವಂತ ನಗರವನ್ನು ಯಾವತ್ತೂ ಕಟ್ಟಲಾಗುವುದಿಲ್ಲ.

ಎಲ್ಲ ಕಾರ್ಯಗಳನ್ನು ಸರಕಾರವೇ ಮಾಡಬೇಕೆಂದು ಸುಶಿಕ್ಷಿತ ಸಮಾಜ ಕಣ್ಮುಚ್ಚಿ ಕೂಡ್ರಲಾಗುವುದಿಲ್ಲ. ವಿಶೇಷವೆಂದರೆ ಸಮುದಾಯದ ಯಾವ ಒಳ್ಳೆಯ ಕೆಲಸವೂ ಹಣಕಾಸಿನ ಕೊರತೆಯಿಂದ ಸ್ಥಗಿತವಾದ ಉದಾಹರಣೆಯಿಲ್ಲ! ಜಾಗೃತಿಯ ಮಾತಿನ ಹೊರತಾಗಿ ಒಂದು ಹೆಜ್ಜೆಯನ್ನು ರಚನಾತ್ಮಕ ಕಾರ್ಯಕ್ಕೆ ಇಡುವವರ ಕೊರತೆಯಿದೆ. ‘ಟೀಕಿಸುತ್ತಾರೆ, ಹಣ ಹೊಡೆಯುವ ಕೆಲಸವೆಂದು ಮಾತಾಡುತ್ತಾರೆ, ಕೆರೆಯಿಂದ ಪ್ರಯೋಜನವಿಲ್ಲವೆಂದು ಮೂದಲಿಸುತ್ತಾರೆ, ಮಾಡಲು ಬೇರೆ ಕೆಲಸವಿಲ್ಲವೆಂದು ನಗುತ್ತಾರೆ, ಹೂಳು ತೆಗೆಯುವಲ್ಲಿ ಮೋಸವಾಗಿದೆಯೆಂದು ಹೇಳಿಕೆ ನೀಡುತ್ತಾರೆ….’ ನೆನಪಿಡಿ ಸಾಮಾಜಿಕ ಕೆಲಸದ ನಿಜವಾದ ನೋವು, ಅನುಭವ ಇರುವ ಯಾರೂ ಇಂಥ ಮಾತಾಡುವುದಿಲ್ಲ. ಟೀಕೆ, ಮಾತುಗಳಿಂದ ಯಾವ ಕೆಲಸವಾಗುವುದಿಲ್ಲ. ಮುಂದೆ ಹೆಜ್ಜೆಯಿಟ್ಟಾಗ ಇಂಥ ಮಾತುಗಳು ಸಹಜವಾಗಿ ಬರುತ್ತವೆ. ಯಾವತ್ತೂ ನೀರಿಗೆ ಇಳಿದರಷ್ಟೇ ಆಳ ಅರ್ಥವಾಗುತ್ತದೆ. ಜಲಕ್ಷಾಮದ ಸಂಕಟದಲ್ಲಿ ಒಂದು ಉತ್ತಮ ಕೆಲಸ ಮಾಡುವ ಅವಕಾಶ ದೇವರು ನಮಗೆ ನೀಡಿದ್ದಾನೆಂಬ ಅರಿವಿನಲ್ಲಿ ಒಮ್ಮನಸ್ಸಿನಿಂದ ಮುಂದಾಗಬೇಕು. ಇಂದು ಧೈರ್ಯವಾಗಿಡುವ ಒಂದು ಹೆಜ್ಜೆ ನಾಳೆ ನಗರದ ಇನ್ನಷ್ಟು ಕೆರೆಗಳಿಗೆ ಮರುಜೀವ ನೀಡುವ ಪ್ರೇರಣೆಯಾಗಬಹುದು. ಕೆರೆ ಕಾಯಕದ ಹುಚ್ಚನ್ನು ಯುವತಲೆಮಾರಿಗೆ ಹಬ್ಬಿಸಬಹುದು.

ಕೆರೆ ಕಾಯಕ ಸಮುದಾಯದ ಉತ್ಸವವಾಗಲಿ
ಕೆರೆ ಕಾಯಕ ಹಲವರನ್ನು ಹತ್ತಿರ ಸೆಳೆಯುತ್ತದೆ. ಮಾತನಾಡುವವರು ಯಾರು? ನಿಜವಾಗಿ ಕೆಲಸ ಮಾಡುವವರು ಯಾರು? ಸಾಮಾಜಿಕ ಕಾರ್ಯಕ್ಕೆ ಹಣದ ನೆರವು ನೀಡುವವರು ಯಾರು? ಶ್ರಮಪಡುವ ಕಾರ್ಯಕರ್ತರು ಯಾರೆಂದು ತಿಳಿಯುತ್ತದೆ. ಜನರ ಜೊತೆ ಹೇಗೆ ಮಾತಾಡಬೇಕು, ಕೆರೆ ಕೆಲಸಕ್ಕೆ ಜನರನ್ನು ಹೇಗೆ ಜೋಡಿಸಬೇಕೆಂದು ಒಂದು ಕೆರೆ ಆರಂಭಿಸಿದರೆ ತಿಳಿಯುತ್ತದೆ.

ಒಂದು ಕೆರೆ ನಿರ್ಮಿಸಿದ ಬಳಿಕ ಸುತ್ತಲಿನ ಜನರನ್ನು ಸೇರಿಸಿ ಕೆರೆಯನ್ನು ಸಮುದಾಯಕ್ಕೆ ಅರ್ಪಿಸುವ ಕಾರ್ಯಕ್ರಮ ಮಾಡಬೇಕು. ನೀರು ಹಾಳು ಮಾಡದಂತೆ, ಕಸ ಚೆಲ್ಲದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೆರೆ ನಿರ್ಮಾಣದ ಅನುಭವ ಹಂಚುತ್ತ ಹೊಸ ತಲೆಮಾರಿಗೆ ನೀರಿನ ಸಂರಕ್ಷಣೆಯ ಮಹತ್ವ ವಿವರಿಸಬೇಕು. ಇದರಿಂದ ನಮ್ಮ ಅಮೂಲ್ಯ ಜಲಮೂಲಗಳು ಉಳಿಯಬಹುದು.

ಬನ್ನಿ ಕರ್ನಾಟಕದ ಎಲ್ಲಾ ಕೆರೆಗಳ ಹೂಳೆತ್ತುವ ಮತ್ತು ಅಭಿವೃದ್ಧಿ ಮಾಡುವ ಕೆಲಸ ಹಾಗೂ ಹೊಸ ಕೆರೆ ಮಾಡುವ ಸಂಕಲ್ಪ ಮಾಡೋಣ👏

ಸ್ವಯಂ ಪ್ರೇರಿತರಾಗಿ ಬನ್ನಿ ಇದು ನಮ್ಮ ನಾಡು ಹಾಗೂ ನಮ್ಮ ರೈತರು ಆರ್ಥಿಕವಾಗಿ ಮುಂದೆ ಬರಲು ಕೆರೆಗಳಿಂದ ನೀರು ಒದಗಿಸುವ ಕೆಲಸ ಮಾಡೋಣ ಜೊತೆಗೆ ಕೆರೆಗಳಿಂದ ಅಂತರ್ಜಲ ಹೆಚ್ಚಿಸುವ ಮತ್ತು ನಿರೀನ ಸಂಗ್ರಹ ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ🤔

ಯುವ ಹೋರಾಟಗಾರ✍️
ಶಿವಕುಮಾರ ಕೋಡ್ಲಿ
ಖಡ್ಗ ಸಂಘ (ರಿ) - ಕರ್ನಾಟಕ
+919620381888
ಬ್ಲಾಗ್ - http://shivakumarkodli.blogspot.in/2018/04/blog-post_15.html?m=1

Thursday, April 12, 2018

ಯಾರಿಗೆ ಹೇಳಲಿ ನನ್ನ ವ್ಯಥೆ ?? - By Hemanth and Raghu

ಏ ಮಾನವ,

ನನ್ನ ಈಗಿನ ಪರಿಸ್ಥಿತಿಗೆ ನೇರ ಹೋಣೆ ನೀನೆ.
ನಾನೀಗ ಅಳಿವಿನಂಚಿನ್ನಲಿರುವುದು  ನಿನಗೆ ಗೊತ್ತಿದ್ದರೂ ನೀನೇಕೆ ಮೌನವಾಗಿರುವೆ ?  ನೀನೇ ನನ್ನನ್ನು ಸರಿಪಡಿಸಬೇಕು-ಇಲ್ಲವಾದರೆ ಮುಂದೊಂದು ದಿನ ನನ್ನನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುತ್ತೀಯಾ.....
ಪಶ್ಚಾತ್ತಾಪ ಪಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊ...........
ಮೌನ ಮುರಿದು ನನ್ನನ್ನು ಉಳಿಸಲು ಮುಂದೆ ಬಾ.....

-ಇಂತಿ ನಿನ್ನ ಜೀವನಾಡಿ ಸೂಳೆಕೆರೆ

ದಯವಿಟ್ಟು ಸಾದ್ಯವಾಸಷ್ಟು ಶೇರ್ ಮಾಡಿ ವಿಷಯ ತಲುಪಿಸಿ.
             
ಇಂದ,
ಖಡ್ಗ ಸ್ವಯಂಸೇವಕರ ಸಂಘ(ರಿ) - ಕರ್ನಾಟಕ.

ಸಂಪರ್ಕಿಸಿ - ೯೯೭೨೪೧೪೨೫೧
ಆಸಕ್ತಿ ಉಳ್ಳವರು ಕೆಳಗಿನ ಲಿಂಕ್ ಕ್ಲಿಕ್ ಮಡುವುದರ ಮೂಲಕ ನಮ್ಮ ಸಂಘಟನೆಯನ್ನು ಸೇರಿಕೊಳ್ಳಿ.

ವಾಟ್ಸಪ್ ಲಿಂಕ್.
https://chat.whatsapp.com/KWfaO6FLLawDRjgxZ2bws7

ಟೆಲಿಗ್ರಾಂ ಲಿಂಕ್.

https://t.me/joinchat/GumQEQ8kD9OK9FMyvjlfvg

ಶಾಂತಿಸಾಗರ(ಸೂಳೆಕೆರೆ) ಯನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸಬೇಕೇ ?

ಸ್ನೇಹಿತರೇ,

ಕೆಲವು ಜನ ಪ್ರತಿನಿಧಿಗಳು, ಬುದ್ದಿ ಜೀವಿಗಳು, ಶಾಂತಿಸಾಗರದ ಅಭಿಮಾನಿಗಳು ಹೇಳುತ್ತಾರೆ ಶಾಂತಿಸಾಗರವನ್ನು ಒಂದು ಪ್ರೇಕ್ಷಣೀಯ ತಾಣವಾಗಿ ಮಾಡಬೇಕು ಎಂದು.

ಮನುಷ್ಯನ ಆಸೆಗೆ ಎಲ್ಲೆ ಇಲ್ಲ, ಈಗಾಗಲೇ ಶಾಂತಿಸಾಗರ ೧೬೦೦ ಎಕರೆಗಳಷ್ಟು ಒತ್ತುವರಿಯಾಗಿದೆ , ಒಂದು ವೇಳೆ ಪ್ರೇಕ್ಷಣೀಯ ಸ್ಥಳವಾಗಿಬಿಟ್ಟರೆ ಸಂಪೂರ್ಣ ಸ್ಥಳ ವ್ಯವಹಾರಿಕ ಕೇಂದ್ರವಾಗುತ್ತದೆ.

ಮಾನವ ಎಂಬ ಜೀವಿ ಎಲ್ಲಿ ಅಭಿವೃದ್ಧಿ ಎಂಬ ಹೆಸರು ಹೇಳಿಕೊಂಡು ವ್ಯವಹಾರಿಕ ಚಿಂತನೆಯೊಂದಿಗೆ ಕಾಲಿಡುತ್ತಾನೆಯೋ ಅಲ್ಲಿ ಪ್ರಕೃತಿಯ ಸರ್ವನಾಶ ಖಚಿತ.

ಸರ್ಕಾರ ಹೇಗೆ ನಮ್ಮ ಕಾಡುಗಳನ್ನು ಆಧುನೀಕರಣವೆಂಬ ಭೂತದ ಮನುಕುಲದ ರಕ್ಕಸರಿಂದ ರಕ್ಷಿಸಲು "ರಕ್ಷಿತ ಅಭಯಾರಣ್ಯ" ಗಳನ್ನು ಘೋಷಿಸಿ ಸಂರಕ್ಷಿಸುತ್ತಿದೆಯೋ ಹಾಗೆಯೇ ನಮ್ಮ ಶಾಂತಿಸಾಗರವನ್ನು "ರಕ್ಷಿತ ಅಭಯಸಾಗರ" ಎಂದು ಗುರುತಿಸಿ ಕೆರೆಯ ಇಂಚು ಭೂಮಿಯೂ ಒತ್ತುವರಿಯಾಗದಂತೆ ತಡೆದು ಕೆರೆಯನ್ನು ಹಿಂದಿನ ಗತ ವೈಭವಕ್ಕೆ ತರುವ ಕೆಲಸ ಮಾಡಬೇಕು.

ಈ ಭೂಮಿಮೇಲೆ ಪ್ರತಿಯೊಂದು ಜೀವಿಗಳಿಗೂ ಸ್ವತಂತ್ರವಾಗಿ ಮತ್ತು ನಿರ್ಭಯವಾಗಿ ಬದುಕುವ ಹಕ್ಕಿದೆ .ಮಾನವ ಸ್ವಲ್ಪ ಬುದ್ದಿಶಾಲಿ ಅಷ್ಟೆ.

ಕೆರೆಗಳಿರುವುದು ನಮಗೆ ಮಾತ್ರವಲ್ಲ .ಅನೇಕ ಪ್ರಾಣಿ, ಪಕ್ಷಿಗಳು ನೇರವಾಗಿ ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿವೆ.ಸೂಳೆಕೆರೆಯನ್ನು ನಾವು ಪ್ರೇಕ್ಷಣೀಯ ಸ್ಥಳ ಮಾಡುವುದರಿಂದ ಎಷ್ಟು ನಮಗೆ ಲಾಭಗಳಿವೆಯೋ ಅದಕ್ಕಿಂತ ಹೆಚ್ಚಾಗಿ ಪರಿಸರಕ್ಕೆ ತೋಂದರೆ ಇದೆ.ಅಷ್ಟಲ್ಲದೇ ಅದನ್ನು ಪ್ರೇಕ್ಷಣೀಯ ಸ್ಥಳ ಮಾಡುವ ಅನಿವಾರ್ಯತೆ ಏನಿದೆ.

ಪ್ರೇಕ್ಷಣೀಯ ಸ್ಥಳಗಳು ನೈಸರ್ಗಿಕ ವಾಗಿ ಇದ್ದರೆ ಎಲ್ಲರಿಗೂ ಒಳ್ಳೆಯದು.ತಾಲ್ಲೂಕಿನ ಹೆಸರು ಪ್ರಖ್ಯಾತಿ ಮಾಡಬೇಕೆಂದರೆ ಬೇರೆ ಕೆಲಸಗಳನ್ನು ಮಾಡೋಣ.ಕೆರೆಗಳ ಜೊತೆ ಆಟ ಹಾಡೋದು ಬೇಡ.

ಅದೇ ಹಣವನ್ನು ಕೆರೆಯ ಹೂಳು ಎತ್ತಿಸಲು ಬಳಸಿ.
ಪ್ರೇಕ್ಷಣೀಯ ಸ್ಥಳಮಾಡಿ ಅದರಿಂದ ಬಂದ ಹಣವನ್ನು ಪ್ರಕೃತಿಗೆ ಕೊಟ್ಟು ನೀನು ಚನ್ನಾಗಿರು ಎಂದು ಹೇಳಿದರೆ ಅರ್ಥವಿಲ್ಲ.

ಪ್ರೇಕ್ಷಣೀಯ ತಾಣವನ್ನಾಗಿ ಮಾಡಿ, ನಾವು ಎಷ್ಟೇ ಜವಾಬ್ದಾರಿಯಿಂದ ಕೆರೆಯನ್ನು ಪ್ಲಾಸ್ಟಿಕ್ ಮುಕ್ತ ,ನಿಸರ್ಗಕ್ಕೆ ತೊಂದರೆ ಕೊಡದೆ ಕಾಪಾಡುತ್ತೆವೆ ಎಂದರೂ ಅದು ಅಸಾಧ್ಯ ,ಯಾವುದೋ ಒಂದು ರೀತಿಯಲ್ಲಿ ತೊಂದರೆ ಪರಿಸರಕ್ಕೆ ಕಟ್ಟಿಟ್ಟಬುತ್ತಿ.ಹಾಗಾಗಿ ಸೂಳೆಕೆರೆಯ ಮದ್ಯ ದಲ್ಲಿ ದ್ವೀಪ ಅಥವಾ ಗೆಸ್ಟ್ ಹೌಸ್ ಅವಶ್ಯಕತೆ ಇಲ್ಲ.

ನಾವೆಲ್ಲರೂ ಸೇರಿ ಸಾಯುವ ಅಂಚಿನಲ್ಲಿರುವ ಕೆರೆಯನ್ನು ಉಳಿಸುವ ಕೆಲಸ ಮಾಡೋಣ.

ನಮ್ಮ ಹಿರಿಯರು ಈ ಕೆರೆಯನ್ನು ಕಟ್ಟಿದ ಉದ್ದೇಶ ಕುಡಿಯುವ ನೀರಿಗಾಗಿ ಮತ್ತು ಕೃಷಿಗೆ ಉಪಯೋಗಿಸಲೆಂದು. ಆದರೆ ಇಂದು ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತೀದ್ದೇವೆ.

ಶಾಂತಿಸಾಗರದ ವಿಷಯದಲ್ಲಿ ವ್ಯವಹಾರಿಕ ಚಿಂತನೆಬೇಡ. ಕೆರೆಯ ನೈಸರ್ಗಿಕ ಪರಿಸರವನ್ನು ಹಾಳುಗೆಡವುದು ಬೇಡ.

ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ. ತಪ್ಪು ಮಾತನಾಡಿದ್ದರೆ ಕ್ಷಮೆ ಇರಲಿ.

ಇಂದ,
ಹೇಮಂತ್ ಮತ್ತು ರಘು ಬಿ ಆರ್.
ಖಡ್ಗ ಸಂಘ(ರಿ). ಕರ್ನಾಟಕ

Friday, March 23, 2018

No Helmet - No Entry - By - Hemanth T L - Shimoga


ಖಡ್ಗ ಸಂಘ ಸದಸ್ಯತ್ವದ ಅರ್ಜಿ - (KRF - 1)ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು,

ಬ್ಲೂ ಇಂಕ್ ಪೆನ್ನಿನಲ್ಲಿ ಸಂಪೂರ್ಣವಾಗಿ ಭರ್ತಿಮಾಡಿದ ಅರ್ಜಿಯ ಜೊತೆಯಲ್ಲಿ, ಸಹಿ ಮಾಡಿದ ಆಧಾರ್/ಡಿಎಲ್/ಪಾಸ್ಪೋರ್ಟ್/ರೇಷನ್ ಕಾರ್ಡ್ ಮತ್ತು ಗರಿಷ್ಟ ವಿದ್ಯಾರ್ಹತೆಯ ಪ್ರಮಾಣ ಪತ್ರ ಅಥವಾ ಅಂಕ ಪಟ್ಟಿಯ ಜೆರಾಕ್ಸ್ ಪ್ರತಿಯನ್ನು ತಪ್ಪದೇ ಕೆಳಗಿನ ವಿಳಾಸಕ್ಕೆ ಭಾರತೀಯ ಅಂಚೆಯ ಮೂಲಕ ಕಳುಹಿಸಿಕೊಡಬೇಕಾಗಿ ವಿನಂತಿ.  

ರಘು ಬಿ ಆರ್ /ಆಫ್ ರಾಜಪ್ಪ ಬಿ ಕೆ
#41  -  ಪ್ರಕೃತಿ ನಿಲಯ,
ಹೊನ್ನೇಮರದಹಳ್ಳಿನೀತಿಗೆರೆ (ಪೋಸ್ಟ್ )
ಚನ್ನಗಿರಿ (ತಾಲ್ಲೂಕ್ )
ದಾವಣಗೆರೆ (ಜಿ) – 577215
ಮೊಬೈಲ್  -  9972414251EXPENSES 2019-2020

SL No. Date Work Received Expense Total Donated By 1. 09-05-2019 Khadga Sangha Renewal NA 3000 34781 Khadga ...