Thursday, March 22, 2018

ಹೊಡೆಬೀರನಳ್ಳಿ ಚಿಂಚೋಳಿ ಕಲಬುರಗಿ - ಕೆರೆ ಮಾಡುವ ಯೋಜನೆ,

ಹೊಡೆಬೀರನಳ್ಳಿ ಚಿಂಚೋಳಿ ಕಲಬುರಗಿ

ಕೆರೆ ಮಾಡುವ ಯೋಜನೆ,

ನಮ್ಮ ಹೊಡೆಬೀರನಳ್ಳಿ ಗ್ರಾಮ ಮಳೆಗಾಲ ಬಂತು ಅಂದರೆ ನೋಡಲು ತುಂಬಾ ಅವಿಸ್ಮರಣೀಯ ಪ್ರದೇಶ ಏಕೆಂದರೆ ಮೂರು ಕಡೆ ಗುಡ್ಡ ಇರುವದರ ಪ್ರಯುಕ್ತ ಹಾಗೂ ನಮ್ಮ ಊರಿನ ಉತ್ತರ ಭಾಗಕ್ಕೆ ಎರಡರಿಂದ ಮೂರು ಕಿಲೋಮೀಟರ್ ದೂರ ಹೋದರೆ ಪ್ರಕೃತಿಯ ಮಡಿಲಲ್ಲಿ ಮೂರು ಕಡೆ ಗುಡ್ಡ ನಡುವೆ ಶ್ರೀ ಕ್ಷೇತ್ರ ಬಾಬಾಸಾಬ್ ದರ್ಗಾ ಇದೆ.

ಮುಸ್ಲಿಂ ಮತ್ತು ಹಿಂದೂ ಧರ್ಮದ ಎಲ್ಲಾ ಜಾತಿಯ ಜನರು ಈ ದೇವರಿಗೆ ಬಹಳ ಸತ್ಯ ಮತ್ತು ಪೂಜ್ಯ ಭಾವನೆಯಿಂದ ನಡೆದುಕೊಂಡು ಬಂದಿದ್ದಾರೆ. ನಮ್ಮ ಹಳ್ಳಿಯ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರು ಹಾಗೂ ಬೇರೆ ಬೇರೆ ಜಿಲ್ಲೆಯಿಂದ ಕೂಡ ಪ್ರತಿ ಅಮಾವಾಸ್ಯೆಗೆ ಬಂದು ಹೋಗುತ್ತಾರೆ. ಗುರುವಾರದಂದು ಜಾವಳ, ಕಂದುರಿ ಅಂತ ದೇವರಿಗೆ ನೈವೇದ್ಯ ಮಾಡುವ ಪ್ರಕ್ರಿಯೆ ಪುರಾತನ ಕಾಲದಿಂದಲೂ ನಡೆದುಬಂದಿದೆ.

ಈ ಪ್ರದೇಶಕ್ಕೆ ಹೋಗಲು ಡಾಂಬರಿನ ರಸ್ತೆ ಮಾಡಿಸಿಕೊಡಿ ದಯವಿಟ್ಟು ಮತ್ತು ಕೆರೆ ಮಾಡಲು ಯೋಜನೆ ಜಾರಿಗೆ ತರಬೇಕೆಂದು ಮಾನ್ಯ ಸೇಡಂ ಶಾಸಕರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ.

ಈ ಪ್ರದೇಶ ಮೂರು ಕಡೆ ಗುಡ್ಡ ಇರುವದರ ಪ್ರಯುಕ್ತ ಎಲ್ಲಾ ನೀರು ಸಂಗ್ರಹಿಸಬಹುದು ಒಂದು ಕೆರೆ ಮಾಡಿದರೆ ನಮ್ಮ ಹಳ್ಳಿಯ ರೈತರಿಗೆ ಕೃಷಿ ಮಾಡಲು ಅನುಕೂಲವಾಗುತ್ತೆ ಜೊತೆಗೆ ಸುತ್ತಮುತ್ತಲಿನ ಹಳ್ಳಿಗೂ ನೀರು ಸರಬರಾಜು ಮಾಡಬಹುದು.

ನಮ್ಮ ಭಾಗದ ಶ್ರೀ ವೀರೇಂದ್ರ ಪಾಟೀಲ್ ಸರ್ ಅವರು ಮುಖ್ಯಮಂತ್ರಿ ಇದ್ದಾಗ ಇದರ ಬಗ್ಗೆ ಚರ್ಚೆ ಮಾಡಿದರು ಅನ್ನೋ ಮಾಹಿತಿ ಇದೆ ಆದರೆ ಅದು ಕೈತಪ್ಪಿ ಬೇರೆ ಪ್ರದೇಶದಲ್ಲಿ ಕೆರೆ ಮಾಡಿದರು ಅನ್ನೋ ನಮ್ಮ ಹಿರಿಯರು ಹೇಳುವ ಮಾತು ಏನೇ ಇರಲಿ ಈ ಪ್ರದೇಶದಲ್ಲಿ ಕೆರೆ ಮಾಡಬೇಕು ಜೊತೆಗೆ ನೀರಾವರಿ ಮೂಲಕ ಆರ್ಥಿಕವಾಗಿ ಕೃಷಿಯಲ್ಲಿ ನಮ್ಮ ರೈತ ಮುಂದೆ ಬರಬೇಕು ಅನ್ನೋ ಅನಿಸಿಕೆ ನನ್ನದು.

ಹಿಂದೆ ಹಿರಿಯರು ಕೆರೆಗಳ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದ್ದರು. ‘ಊರಿಗೊಂದು ಕೆರೆಯಾದರೆ ಬಾವಿಗೆಲ್ಲ ನೀರೇ ನೀರು'. ಎಂಬ ಗಾದೆ ಮಾತು ಪ್ರಚಲಿತದಲ್ಲಿತ್ತು.

ಕೆರೆಗಳನ್ನು ನಿರ್ಮಿಸುವದರಿಂದ ಸುತ್ತಲಿನ ಅದೆಷ್ಟೋ ಬಾವಿಗಳಿಗೆ ಜೀವಸೆಲೆ ಒದಗಿಸುತ್ತದೆ. ಹಲವು ಜಮೀನುಗಳಲ್ಲಿ ಜಲ ಸಂವರ್ಧನೆಗೊಳ್ಳುತ್ತದೆ.

ಹೊಡೆಬೀರನಳ್ಳಿ ಕೆರೆ ಒಂದು ದಿನ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಯಾಗಬೇಕು ಮತ್ತು ಮೂರು ಕಡೆ ಪ್ರಕೃತಿದತ್ತವಾದ ಸೌಂದರ್ಯ ಇರುವದರ ಪ್ರಯುಕ್ತ ನೋಡಲು ಅವಿಸ್ಮರಣೀಯ ಪ್ರದೇಶ ಇದರ ಅಭಿವೃದ್ಧಿಗಾಗಿ ನನ್ನ ಹೋರಾಟ ಇದ್ದೆ ಇರುತ್ತೆ.

ನಮ್ಮ ಊರಿನ ಕೆಲವು ಸಮಸ್ಯೆಗಳು,

ಹೊಡೆಬೀರನಳ್ಳಿ ಒಂದು ಗ್ರಾಮ ಪಂಚಾಯಿತಿ ಇರುವ ಊರು ಆದರೆ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟ ಇದೆ ಏಕೆಂದರೆ ಕಳಪೆ ಗುಣಮಟ್ಟದ ಪೈಪ್ಲೈನ್ ಮತ್ತು ನೀರು ಸರಬರಾಜು ಮಾಡುವ ವಾಟರ್ ಟ್ಯಾಂಕ್ ಸರಿಯಾದ ಪ್ರದೇಶದಲ್ಲಿ ಇರದೇ ಇದಕ್ಕೆ ಕಾರಣ.
ಊರಿನ ಮೂರು ಕಡೆ ಡಾಂಬರಿನ ರಸ್ತೆ ಮಾಡಿಸಬೇಕು ಒಂದು ಬಾಬಾಸಾಬ್ ದರ್ಗಾ, ಸಂಕ್ರಾಂತಿ ಗುಂಡ, ಮಾರ್ನಾಳ (ಮೊಹರಂ ಜಾತ್ರೆ).
ಗುಣಮಟ್ಟವಾದ ಸಾರ್ವಜನಿಕ ಸೌಚಾಲಯ, ಸರಕಾರಿ ಶಾಲೆಯ ಗುಣಮಟ್ಟವಾದ ತರಬೇತಿ, ಗ್ರಂಥಾಲಯದಲ್ಲಿ ಸಿಬ್ಬಂದಿ ಮತ್ತು ಪುಸ್ತಕಗಳನ್ನು ಇಲ್ಲದೆ ಇರುವದು, ನಿಜವಾದ ಬಡವರಿಗೆ ಬಿಪಿಎಲ್ ಪಡಿತರ ಚೀಟಿ ಇಲ್ಲದೆ ಇರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಬಗೆಹರಿಸಬೇಕಾಗಿದೆ.

ಯುವ ಹೋರಾಟಗಾರ✍️
ಶಿವಕುಮಾರ ಕೋಡ್ಲಿ ಹೊಡೆಬೀರನಳ್ಳಿ

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...