Thursday, March 22, 2018

@ಖಡ್ಗ ಯುವಕರ ಸಂಘ - ಸ್ವಯಂ ಸೇವಕರು - ಚನ್ನಗಿರಿ - ಅಭಿಯಾನ@

ಖಡ್ಗ ಸಂಘ - ಸ್ವಯಂ ಸೇವಕರು -  ಅಭಿಯಾನ

ಸೂಳೆಕೆರೆ ( ಏಷ್ಯಾದ ಎರಡನೆಯ ದೊಡ್ಡ ಕೆರೆಯ ಮತ್ತು ಭಾರತದ ಹಾಗು ಕರ್ನಾಟದ ಅತಿ ದೊಡ್ಡ ಕೆರೆ) ಕೆಲವು ವಿವರಗಳು

ಕೃಪೆ - ಇಂಟೆರ್ನೆನ್ಟ್, ಗೂಗಲ್ ಮತ್ತು ಟಿವಿ ಮಾಧ್ಯಮಗಳ ವರದಿ ಆಧಾರದ ಮೇಲೆ
ಸೂಳೆಕೆರೆಯ ಸ್ಥಾಪನೆ
ಸುಮಾರು 12 ನೇ ಶತಮಾನಕ್ಕೂ ಮೊದಲು ಒಬ್ಬ ಮಹಿಳೆಯಿಂದ
ಉದ್ದ
8 ಕಿಲೋ ಮೀಟರ್ ಗಳು
ಅಗಲ
4 ಕಿಲೋ ಮೀಟರ್ ಗಳು
ಒಟ್ಟುವಿಸ್ತಾರ
61 ಸ್ಕ್ವೇರ್ ಕಿಲೋ ಮೀಟರ್
ಮೊದಲಿನ ವಿಸ್ತಾರ
6650 ಎಕರೆಗಳು
ಇಂದಿನ ವಿಸ್ತಾರ
5000 ಎಕರೆಗಳು
ಭ್ರಷ್ಟರ ಹಿಡಿತದಿಂದ ಒತ್ತುವರಿ ಯಾಗಿರುವ ಜಾಗ
1650 ಎಕರೆಗಳು
ಒಳ ಹರಿವಿನ ಮೂಲಗಳು
·         ಹರಿದ್ರಾವತಿ ನದಿ ( ಇಂದು ಇದನ್ನು ಹಿರೇ ಹಳ್ಳ ಎಂದು ಕರೆಯಲಾಗುತ್ತದೆ)
·         AND
·         ತುಂಗಾ ಭದ್ರ ನದಿ
ಹೊರ ಹರಿವು
·         ಬಸವನ ತುಂಬು
AND
·         ಸಿದ್ದನ ತುಂಬು
ಫಲಾನುಭವಿಗಳು
·         4700 ಎಕರೆಗಳಿಗೆ ನೀರುಣಿಸುತ್ತದೆ
·         ದಾವಣಗೆರೆ ಮತ್ತು ಚಿತ್ರದುರ್ಗದ 612 ಹಳ್ಳಿಗಳು ಇದರ ಮೇಲೆ ಅವಲಂಬಿತವಾಗಿವೆ
·         ಸುಮಾರು 5 -10 ಲಕ್ಷ ರೈತರು  ಇದರ ಮೇಲೆ ಅವಲಂಬಿತರಾಗಿರುತ್ತಾರೆ 
·         ಚನ್ನಗಿರಿ, ದಾವಣಗೆರೆ ಮತ್ತು ಚಿತ್ರದುರ್ಗ ಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ

·         ಸಾಯುವ ಸ್ಥಿತಿಯಲ್ಲಿ ಇರುವವರನ್ನು ಬದುಕಿಸಬೇಕೇ ಹೊರತು ಕೊಲ್ಲಬಾರದು.
·         ಬತ್ತುತ್ತಿರುವ ಕೆರೆಗಳನ್ನು ತುಂಬಿಸಬೇಕೇ ಹೊರತು ಹಣಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲಿ ಮಾರಿಕೊಳ್ಳಬಾರದು.
·         ನಮ್ಮೆಲ್ಲರ ಜೀವ ವಾಗಿರುವ ಶಾಂತಿ ಸಾಗರವನ್ನು ಉಳಿಸಿ ಬೆಳೆಸಲು ಕೊನೆಯ ಉಸಿರಿನ ವರೆಗೂ ಹೊ ರಾಡೋಣ.
·         ಎಲ್ಲ ಜಾತಿ, ಸ್ವಾರ್ಥ, ದ್ವೇಷ, ರಾಜಕೀಯವನ್ನು ಮರೆತು ನಮ್ಮೆಲ್ಲರ ಜೀವನಾಡಿಯಾಗಿರುವ ಸೂಳೆಕೆರೆ ( ಶಾಂತಿ ಸಾಗರವನ್ನು) ಉಳಿಸಲು ಪ್ರತಿಜ್ಞೆ ಮಾಡೋಣ.

  
ಖಡ್ಗ ಯುವಕರ ಸಂಘ - ಚನ್ನಗಿರಿ - ಸ್ವಯಂ ಸೇವಕರ ಉದ್ದೇಶ -
·         ವೈಜ್ಞಾನಿಕವಾಗಿ ಸೂಳೆಕೆರೆಯ ಹೂಳು ತೆಗೆಸುವುದು
·         ಇಂದಿನ ಸಂಗ್ರಹಣಾ ಸಾಮರ್ಥ್ಯ - 1 .6  ಟಿಎಂಸಿ ದಿಂದ 3  ರಿಂದ 4 ಟಿಎಂಸಿ ಗೆ ಹೆಚ್ಚಿಸುವುದು 
·         ಒತ್ತು ವರಿ ಯಾಗಿರುವ 1650 ಎಕರೆ ಜಾಗವನ್ನು ಸರ್ಕಾರದ ವತಿಯಿಂದ ಹಿಂಪಡೆದು ಕೆರೆಯ ಅಭಿವೃದ್ಧಿ ಮಾಡುವುದು
·         ಸೂಳೆಕೆರೆಯ ನೀರಿನ ಮೂಲವಾದ ಹರಿದ್ರಾವತಿ ( ಹಿರೇ ಹಳ್ಳ ) ಹೂಳನ್ನು ತೆಗೆಸುವುದು ಮತ್ತು ಹಳ್ಳದಿಂದ ಅಕ್ರಮ ಮರಳು ಸಾಗಣೆಯನ್ನು ತಡೆಯುವುದು.
·         ಹಿರೇ ಹಳ್ಳದಲ್ಲಿ ವರ್ಷದ 365 ದಿನವೂ ನೀರು ಹರಿಯುವಂತೆ ಮಾಡುವುದು.
·         ಹಿರೇ  ಹಳ್ಳ ಮತ್ತು ಸೂಳೆಕೆರೆಯನ್ನು ಮೊದಲಿನ ಗತ ವೈಭವಕ್ಕೆ ಮರಳಿಸುವುದು

ಅಭಿವೃದ್ಧಿ ಕಾರ್ಯದ ಜಾರಿ ಹೇಗೆ ?
·         ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ. ಮತ್ತು ಡಾ. ಶ್ರೀ ಶಿವಮೂರ್ತಿ ಮುರುಗ ಶರಣರು, ಮುರುಗ ರಾಜೇಂದ್ರ ಮಠ ಚಿತ್ರದುರ್ಗ, ಶ್ರೀ ಗಳನ್ನೂ ಭೇಟಿ ಮಾಡಿ ಸೂಳೆಕೆರೆಯ ಸಮಸ್ಸೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚಿಸುವುದು.
·         ಶಾಂತಿಸಾಗರದ ಪ್ರಸ್ತುತ ಸ್ಥಿತಿ ಹಾಗು ಸಮಸ್ಸೆಯನ್ನು ಚನ್ನಗಿರಿ, ದಾವಣಗೆರೆ ಹಾಗು ಚಿತ್ರದುರ್ಗ ಜನರಿಗೆ ತಲುಪಿಸುವುದು.
·         ಚನ್ನಗಿರಿ, ದಾವಣಗೆರೆ ಹಾಗು ಚಿತ್ರದುರ್ಗದ ಹಿರಿಯರು, ರೈತ ಮುಖಂಡರು, ಖಾಸಗಿ ನೌಕರರು, ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿ ಗಳನ್ನ ಸಂಪರ್ಕಿಸಿ ಶಾಂತಿಸಾಗರದ ಸದ್ಯದ ಪರಿಸ್ಥಿತಿ ಮತ್ತು ಸಮಸ್ಸೆಗಳನ್ನು ತಿಳಿಸಿ ಎಲ್ಲರ ಬೆಂಬಲ ಪಡೆಯುವುದು.
·         ಚನ್ನಗಿರಿ, ದಾವಣಗೆರೆ ಮತ್ತು ಚಿತ್ರದುರ್ಗ ಸಮಾಜ ಸೇವಕರು, ರಾಜಕಾರಣಿಗಳು, ಸಂಘ ಸಂಸ್ಥೆಗಳು ಎಲ್ಲರ ಬೆಂಬಲ ಪಡೆಯುವುದು.
·         ಚನ್ನಗಿರಿ, ದಾವಣಗೆರೆ, ಮತ್ತು ಚಿತ್ರದುರ್ಗ ಜಿಲ್ಲೆಯ ಫಲಾನುಭವಿಗಳು ಕನಿಷ್ಠ 4 ಲಕ್ಷ ಎಂದರೂ, ಒಬ್ಬಬ್ಬರೂ 100 ರೂಗಳನ್ನು ಸೂಳೆಕೆರೆಯ ಅಭಿವೃದ್ದಿಗಾಗಿ ದೇಣಿಗೆಯಾಗಿ ನೀಡಿದರು ಸುಮಾರು 4 ಕೋಟಿ ರೂ ಹಣ ಸಂಗ್ರಹವಾಗುತ್ತದೆ.
·         ಮೇಲಿನ ನಿಧಿಯ ಜೊತೆಗೆ ಸರ್ಕಾರದ ಅನುದಾನ ಸ್ಥಳೀಯ ಸಂಘಗಳ ಅನುದಾನ ಇತರೇ ವೈಯುಕ್ತಿಕ ಅನುದಾನಗಳಿಂದ ನಿಧಿಯನ್ನು ಸಂಗ್ರಹಿಸಿದರೆ ನಮ್ಮ ಅಂದಾಜಿನ ಪ್ರಕಾರ ಸುಮಾರು 10 ಕೋಟಿಗೂ ಹೆಚ್ಚು ನಿಧಿ ಸಂಗ್ರಹವಾಗುತ್ತದೆ.
·         ನಿಧಿಯಿಂದ ಸೂಳೆಕೆರೆಯ ಸಮಗ್ರ ಅಭಿವೃದ್ಧಿಯನ್ನು ಮಾಡಬಹುದು.
·         ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ ನಮ್ಮನ್ನು ಬೆಂಬಲಿಸಿ.
·         ವಿಷಯವನ್ನು ಪ್ರತಿಯೊಬ್ಬರಿರಿಗೂ ತಪ್ಪದೇ ಹಂಚಿಕೊಳ್ಳಬೇಕಾಗಿ ಎಲ್ಲರಲ್ಲೂ ಕಳಕಳಿಯ ಮನವಿ.
·         ಇಷ್ಟವಾದರೆ ಕೆಳಗಿನ ವಾಟ್ಸಪ್ಪ್ ಲಿಂಕ್ ಕ್ಲಿಕ್ ಮಾಡಿ ನಮ್ಮೊಂದಿಗೆ ಕೈ ಜೋಡಿಸುವುದರೊಂದಿಗೆ ಬೆಂಬಲಿಸಿ.


ನಿಮ್ಮ,
ರಘು ಬಿ ಆರ್
ಖಡ್ಗ ಯುವಕರ ಸಂಘ - ಒನ್ ಮ್ಯಾನ್ ಆರ್ಮಿ - ಸ್ವಯಂ ಸೇವಕರು.
ಚನ್ನಗಿರಿ.
9972414251

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...